Tuesday, November 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ದೇವರಗುಡ್ಡೆ ಹಾ.ಉ.ಸ.ಸಂಘದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಬಗ್ಗೆ ತನಿಖೆಗೆ ಆದೇಶ

ಬೆಳ್ತಂಗಡಿ : ದೇವರಗುಡ್ಡೆ ಹಾ.ಉ.ಸ.ಸಂಘದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಬಗ್ಗೆ ತನಿಖೆಗೆ ಆದೇಶ

- Advertisement -
- Advertisement -

ಬೆಳ್ತಂಗಡಿ : ಕಲ್ಮಂಜ ಗ್ರಾಮದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಸಿಬ್ಬಂದಿಗಳ ಬಗ್ಗೆ ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ ಮಾದ್ಯಮದಲ್ಲಿ ಅಪಪ್ರಚಾರ ತನಿಖೆಗೆ ಸಹಕಾರ ಸಂಘಗಳ ಉಪನಿಭಂದಕರು ದಕ್ಷಿಣ ಕನ್ನಡ ಜಿಲ್ಲೆ ಅವರಿಂದ ಆದೇಶ ಮಾಡಲಾಗಿದೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಸಿಬ್ಬಂದಿಗಳ ಬಗ್ಗೆ ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ ಮಾದ್ಯಮದಲ್ಲಿ ಅಪಪ್ರಚಾರ ಕುರಿತಂತೆ ಸಹಕಾರ ಸಂಘಗಳ ಉಪನಿಭಂದಕರು ದ. ಕ. ಜಿಲ್ಲೆ ಅವರು 12-10-2026 ರಂದು ಆದೇಶ ಮಾಡಿದ್ದಾರೆ.

ಆದೇಶದಲ್ಲಿ ರಾಜ್ ಕಿಶಾನ್ ಪಿಂಟೋ ಎಂಬ ವ್ಯಕ್ತಿಯು ಹಲವು ದಿನಗಳಿಂದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬೆಳ್ತಂಗಡಿ ತಾಲೂಕು ಈ ಸಂಘದ ಸಿಬ್ಬಂದಿಗಳ ಬಗ್ಗೆ ಹಾಗೂ ಸಂಘದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಪತ್ರಿಕಾ ಮಾದ್ಯಮದಲ್ಲಿ ಅಪಪ್ರಚಾರ ಮಾಡಿ ತೇಜೋವಧೆ ಮಾಡುತ್ತಿದ್ದು, ಇದರಿಂದ ಸಂಘದ ದೈನಂದಿನ ವ್ಯವಹಾರ ಹಾಗೂ ಇನ್ನಿತರ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ, ಈ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಕಾರ್ಯನಿರ್ವಹಣಾಧಿಕಾರಿ ಕೋರಿಕೊಂಡ ಹಿನ್ನಲೆ ಸಹಕಾರ ಸಂಘಗಳ ಉಪನಿಭಂದಕರು ದ. ಕ. ಜಿಲ್ಲೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ಇವರಿಗೆ ಈ ಸಂಘವು ತಮ್ಮ ಕಚೇರಿಯ ವ್ಯಾಪ್ತಿಗೆ ಒಳಪಡುವುದರಿಂದ ಉಲ್ಲೇಖಿತ ಪತ್ರದಲ್ಲಿನ ಅಂಶಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಂಡು ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರಿಗೆ ಹಿಂಬರಹ ನೀಡಿ ಕಚೇರಿಗೆ ವರದಿಸುವಂತೆ ಆದೇಶಿರುತ್ತಾರೆ.

- Advertisement -

Latest News

error: Content is protected !!