- Advertisement -


- Advertisement -
ಮೂಡುಬಿದಿರೆ: ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರಿನಲ್ಲಿ ಶುಕ್ರವಾರ ವಿರುದ್ಧ ದಿಕ್ಕಿನಲ್ಲಿ ಅತಿಯಾದ ವೇಗವಾಗಿ ಬಂದ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ತೋಡಾರು ನಿವಾಸಿ, ಸ್ಥಳೀಯ ಹಣ್ಣಿನ ಅಂಗಡಿ ಉದ್ಯೋಗಿ ರಿಫಾಝ್ (19) ಮೃತಪಟ್ಟಿದ್ದಾರೆ.
ಮಂಗಳೂರಿನಿಂದ ಮೂಡುಬಿದಿರೆಗೆ ಸಂಚರಿಸುತ್ತಿದ್ದ ‘ಅಭಿಮಾನ್’ ಖಾಸಗಿ ಬಸ್‌ನ ಚಾಲಕ ನಿಯಮ ಮೀರಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಫಾಝ್ ಅವರ ದ್ವಿಚಕ್ರ ವಾಹನಕ್ಕೆ ನೇರವಾಗಿ ಢಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
- Advertisement -


