Sunday, November 1, 2026
Homeಕರಾವಳಿಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕೆ ಘುಮಂತು ಕಾರ್ಯ ಮಂಗಳೂರು ವಿಭಾಗ ಸಂಪೂರ್ಣ ಬೆಂಬಲ; ನವೆಂಬರ್ 2ರ ಹಕ್ಕೊತ್ತಾಯ...

ಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕೆ ಘುಮಂತು ಕಾರ್ಯ ಮಂಗಳೂರು ವಿಭಾಗ ಸಂಪೂರ್ಣ ಬೆಂಬಲ; ನವೆಂಬರ್ 2ರ ಹಕ್ಕೊತ್ತಾಯ ಸಭೆಗೆ ಭಾಗವಹಿಸಲು ಸುದರ್ಶನ್ ಕನ್ಯಾಡಿ ಕರೆ

- Advertisement -
- Advertisement -

ಧರ್ಮಸ್ಥಳ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಮಹತ್ವದ ಶಿಶಿಲ-ಬೈರಾಪುರ ರಸ್ತೆ ನಿರ್ಮಾಣ ಯೋಜನೆಗೆ ಘುಮಂತು ಕಾರ್ಯ (ಅಲೆಮಾರಿ,ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಸಮುದಾಯದ ಕಾರ್ಯ) ತನ್ನ ಸಂಪೂರ್ಣ ಬೆಂಬಲವನ್ನು ಪ್ರಕಟಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ವಿಭಾಗ ಸಂಯೋಜಕರಾದ ಸುದರ್ಶನ್ ಕನ್ಯಾಡಿ ಅವರು, “ಈ ರಸ್ತೆ ಅಭಿವೃದ್ಧಿ ಆದಲ್ಲಿ ಎರಡು ಪ್ರಮುಖ ಜಿಲ್ಲೆಗಳ ನಡುವಿನ ಸಂಪರ್ಕದ ಅಂತರ ಕಡಿಮೆಯಾಗಿ ಭೌಗೋಳಿಕ ಸಂಪರ್ಕ ಇನ್ನಷ್ಟು ಹತ್ತಿರವಾಗಲಿದೆ. ಅಷ್ಟೇ ಅಲ್ಲದೆ, ಇದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಅತ್ಯಂತ ಪೂರಕವಾಗಲಿದ್ದು, ಪ್ರಾದೇಶಿಕ ಆರ್ಥಿಕತೆಗೂ ಹೊಸ ಚೇತನ ನೀಡಲಿದೆ” ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ರಸ್ತೆ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಲು ನವೆಂಬರ್ 2ರಂದು ಬೃಹತ್ ಹಕ್ಕೊತ್ತಾಯ ಸಭೆಯನ್ನು ಅರಸಿನಮಕ್ಕಿಯಲ್ಲಿ ಆಯೋಜಿಸಲಾಗಿದೆ. ಈ ಮಹತ್ವದ ಹೋರಾಟಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಘುಮಂತು ಕಾರ್ಯ ಸಂಘಟನೆಯ ಪರವಾಗಿ ಅವರು ಆತ್ಮೀಯವಾಗಿ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!