Friday, October 30, 2026
Homeತಾಜಾ ಸುದ್ದಿವಿದ್ಯಾರ್ಥಿನಿಯರಿಗೆ ಐ ಲವ್ ಯೂ ಎಂದು ಮೆಸೇಜ್ ಮಾಡುತ್ತಿದ್ದ ಉಪನ್ಯಾಸಕನಿಗೆ ಬಿತ್ತು ಧರ್ಮದೇಟು

ವಿದ್ಯಾರ್ಥಿನಿಯರಿಗೆ ಐ ಲವ್ ಯೂ ಎಂದು ಮೆಸೇಜ್ ಮಾಡುತ್ತಿದ್ದ ಉಪನ್ಯಾಸಕನಿಗೆ ಬಿತ್ತು ಧರ್ಮದೇಟು

- Advertisement -
- Advertisement -

ಮಂಡ್ಯ; ವಿದ್ಯಾರ್ಥಿನಿಯರಿಗೆ ಮೊಬೈಲ್ ಮೂಲಕ ಅಸಭ್ಯ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಉಪನ್ಯಾಸಕನೋರ್ವನಿಗೆ ವಿದ್ಯಾರ್ಥಿನಿಯರು ಧರ್ಮದೇಟು ನೀಡಿ, ತಕ್ಕ ಪಾಠ ಕಲಿಸಿರುವ ಘಟನೆ ನಾಗಮಂಗಲ-ಮಂಡ್ಯ ರಸ್ತೆಯ ಪದವಿ ಕಾಲೇಜಿನಲ್ಲಿ ವರದಿಯಾಗಿದೆ.

ಕಾಲೇಜಿನ ಉಪನ್ಯಾಸಕ ಗಂಗೂ ಎಂಬಾತನೇ ಈ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ. ಈತ ಕಾಲೇಜಿನ ವಿದ್ಯಾರ್ಥಿನಿಯರ ಮೊಬೈಲ್ ನಂಬರ್‌ಗಳನ್ನು ಪಡೆದುಕೊಂಡು ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದನು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಚಾಟಿಂಗ್‌ನಲ್ಲಿ ʼಐ ಲವ್‌ ಯೂ, ಐ ಲೈಕ್‌ ಯೂʼ ಮುಂತಾದ ಅಸಭ್ಯ ಪದಗಳನ್ನು ಬಳಸುವ ಮೂಲಕ ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.

ಸ್ಟಾಫ್ ರೂಮ್‌ಗೆ ನುಗ್ಗಿ ಆಕ್ರೋಶ: ಉಪನ್ಯಾಸಕನ ಕಾಟ ತಾಳಲಾರದೆ ಬೇಸತ್ತ ವಿದ್ಯಾರ್ಥಿನಿಯರು, ಕೊನೆಗೆ ತಾವೇ ಖುದ್ದು ಆತನಿಗೆ ಪಾಠ ಕಲಿಸಲು ಮುಂದಾದರು. ಆತನ ಅಸಭ್ಯ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ನೇರವಾಗಿ ಕಾಲೇಜಿನ ಸಿಬ್ಬಂದಿ ಕೊಠಡಿಗೆ (ಸ್ಟಾಫ್ ರೂಮ್) ನುಗ್ಗಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಆಕ್ರೋಶಿತ ವಿದ್ಯಾರ್ಥಿನಿಯರು ಆತನಿಗೆ ಧರ್ಮದೇಟು ನೀಡಿದ್ದು, ಸಿಕ್ಕಿಬಿದ್ದ ಉಪನ್ಯಾಸಕ ಕೈ ಮುಗಿದು ಕ್ಷಮೆ ಯಾಚಿಸಿದನು.

ಬೀರು ಸಂದಿಯಲ್ಲಿ ಅವಿತುಕೊಂಡ ಕಾಮುಕ: ಗುಂಪಿನಿಂದ ತಪ್ಪಿಸಿಕೊಳ್ಳಲು ಪರದಾಡಿದ ಆತ, ಕೊನೆಗೆ ಕೊಠಡಿಯಲ್ಲಿದ್ದ ಬೀರು ಸಂದಿಯಲ್ಲಿ ಅವಿತುಕೊಳ್ಳಲು ಯತ್ನಿಸಿದ ದೃಶ್ಯ ಕಂಡುಬಂತು. ಈ ಘಟನೆಯು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿನಿಯರ ಈ ಧೈರ್ಯದ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇಂತಹ ಶಿಕ್ಷಕರ ವಿರುದ್ಧ ಇಲಾಖಾ ಹಂತದಲ್ಲೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.

- Advertisement -

Latest News

error: Content is protected !!