Thursday, October 22, 2026
Homeಕರಾವಳಿಮಂಗಳೂರುಮೂಡಬಿದರೆ; ಬಟ್ಟೆ ಒಣಗಾಕುವಾಗ ತಂತಿಯಲ್ಲಿ ಹರಿದ ಕರೆಂಟ್; ತಾಯಿ, ಮಗ ಸಾವು!

ಮೂಡಬಿದರೆ; ಬಟ್ಟೆ ಒಣಗಾಕುವಾಗ ತಂತಿಯಲ್ಲಿ ಹರಿದ ಕರೆಂಟ್; ತಾಯಿ, ಮಗ ಸಾವು!

- Advertisement -
- Advertisement -

ಮೂಡಬಿದಿರೆ: ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ವಿದ್ಯುತ್ ಪ್ರವಹಿಸಿ, ವಿದ್ಯುತ್ ಆಘಾತದಿಂದ ತಾಯಿ ಮತ್ತು ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಮರ್ಸಿ ಮಸ್ಕರೇನಸ್ (45) ಹಾಗೂ ಅವರ ಪುತ್ರ ಶೋನ್‌ ಮಸ್ಕರೇನಸ್ (18) ಮೃತ ದುರ್ದೈವಿಗಳು. ಶೋನ್ ಮೂಡುಬಿದಿರೆಯ ಹೋಲಿ ರೋಸರಿ ಶಾಲೆಯ ವಿದ್ಯಾರ್ಥಿಯಾಗಿದ್ದ.

ಘಟನೆಯ ವಿವರ:

ಬೆಳಿಗ್ಗೆ ಸುಮಾರು 7ರಿಂದ 8 ಗಂಟೆಯ ವೇಳೆಗೆ ಶೋನ್ ಮಸ್ಕರೇನಸ್ ಮನೆಯಲ್ಲಿ ಬಟ್ಟೆ ಒಣಗಿಸಲು ಹೋದಾಗ ಈ ಅನಾಹುತ ಸಂಭವಿಸಿದೆ. ಬಟ್ಟೆ ಹಾಕುವ ಕಬ್ಬಿಣದ ತಂತಿಗೆ ಹೈಟೆನ್ಶನ್‌ ವಿದ್ಯುತ್‌ ತಂತಿ ಸ್ಪರ್ಶಿಸಿ ವಿದ್ಯುತ್ ಪ್ರವಹಿಸಿತ್ತು ಎನ್ನಲಾಗಿದೆ. ಬಟ್ಟೆ ಒಣಗಾಕುವಾಗ ಶೋನ್ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದನ್ನು ಕಂಡ ತಾಯಿ ಮರ್ಸಿ, ಆತನನ್ನು ರಕ್ಷಿಸಲು ಓಡಿ ಬಂದಿದ್ದಾರೆ. ಈ ವೇಳೆ ಅವರಿಗೂ ತೀವ್ರವಾಗಿ ವಿದ್ಯುತ್‌ ಪ್ರವಹಿಸಿ, ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತೋಟದ ಕೆಲಸಕ್ಕೆ ಬಂದ ಕಾರ್ಮಿಕರೊಬ್ಬರು ಮನೆ ಬಳಿ ಬಂದಾಗ ಈ ದಾರುಣ ದೃಶ್ಯ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!