ಕನ್ಯಾಡಿ: ದಿನಾಂಕ 21-10-26 ಬುಧವಾರದಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -ll ಧರ್ಮಸ್ಥಳದಲ್ಲಿ “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗವಾದ ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡ ಧರ್ಮಸ್ಥಳ” ದ ಸೇವಾ ಪ್ರತಿನಿಧಿ ಶ್ರೀಮತಿ ಸುಜಾತ ಮೇಡಂ ಮತ್ತು ಘಟಕ ಪ್ರತಿನಿಧಿ ನಳೀನ್ ಬೇಕಲ್ ಜೊತೆಗೆ ತಂಡದ ಸರ್ವ ಸದಸ್ಯರು ಸೇರಿ ಶಾಲೆಯ ಕೊಠಡಿಗಳು ಮತ್ತು ಸುತ್ತಲಿನ ಪರಿಸರದ ಸ್ವಚ್ಛತೆಯನ್ನು ಮಾಡುವುದರ ಮೂಲಕ ತಂಡದ ಸೇವೆಯನ್ನು ನಮ್ಮ ಶಾಲೆಗೆ ನೀಡಿರುತ್ತಾರೆ.
ಇವರ ಜೊತೆಗೆ SDMC ಅಧ್ಯಕ್ಷರು ಶ್ರೀ ಕೆ ನಂದ ಮತ್ತು ಸಮಿತಿಯ ಸದಸ್ಯರು ಶ್ರೀ ರೂಪೇಶ್ ಕೆ, ಶ್ರೀ ನರೇಶ್ ಮತ್ತು ಶ್ರೀ ನಾಗೇಶ್ ಜೊತೆಗೂಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ.ಎನ್ ಮತ್ತು ಸಹ ಶಿಕ್ಷಕರಾದ ಶ್ರೀಮತಿ ವಿಜಯ, ಶ್ರೀಮತಿ ಹೇಮಲತ, ಅತಿಥಿ ಶಿಕ್ಷಕರಾದ ಶ್ರೀಮತಿ ಭವ್ಯ, ಶ್ರೀಮತಿ ಜಯಶ್ರೀ, ಕುಮಾರಿ ಕಾವ್ಯ, ಸಹಾಯಕಿಯವರಾದ ಶ್ರೀಮತಿ ಪ್ರಸನ್ನ ಮತ್ತು ಶ್ರೀಮತಿ ಯಶೋಧ ಮತ್ತು ನಮ್ಮ ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು ಸೇರಿದರು. ಶೌರ್ಯ ಮತ್ತು ವಿಪತ್ತು ನಿರ್ವಹಣೆ ತಂಡದ ಸಮಾಜಮುಖಿ ಸೇವೆ ಮತ್ತು ತುರ್ತು ಸಂದರ್ಭದಲ್ಲಿ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ.ಇನ್ನಷ್ಟು ಸಮಾಜಮುಖಿ ಸೇವೆಗಳು ನಿಮ್ಮ ತಂಡದ ಮೂಲಕ ನಡೆಯಲಿ ಜೊತೆಗೆ ನಮ್ಮ ಶಾಲೆಗೆ ನೀಡಿದ ಸೇವೆಗೆ ಶಾಲಾ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪೋಷಕ ಮತ್ತು ವಿದ್ಯಾರ್ಥಿ ವೃಂದದ ವತಿಯಿಂದ ಹೃದಯ ಸ್ಪರ್ಶಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.


