Wednesday, October 21, 2026
Homeತಾಜಾ ಸುದ್ದಿಯಾದಗಿರಿ: ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ

ಯಾದಗಿರಿ: ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ

- Advertisement -
- Advertisement -

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪ್ರಕೃತಿ ನಿಯಮಕ್ಕೆ ವಿಚಿತ್ರವೆಂಬಂತೆ ಎಮ್ಮೆಯೊಂದರ ಹೊಟ್ಟೆಯಲ್ಲಿ ಹೋರಿ (ಗೂಳಿ) ಕರು ಜನಿಸಿರುವ ಅಪರೂಪದ ಹಾಗೂ ಅಚ್ಚರಿಯ ಘಟನೆ ವರದಿಯಾಗಿದೆ.

ಗ್ರಾಮದ ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆಯು ಸುಮಾರು 10 ತಿಂಗಳು ಗರ್ಭಧಾರಣೆ ಬಳಿಕ ಈ ವಿಶಿಷ್ಟ ಕರುವಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಎಮ್ಮೆಯು ಕಪ್ಪು ಬಣ್ಣದ ಅಥವಾ ಎಮ್ಮೆಯ ತಳಿಯ ಕರುವನ್ನುE ಹಾಕುತ್ತದೆ. ಆದರೆ, ಈ ಎಮ್ಮೆಯು ಸಂಪೂರ್ಣ ಬಿಳಿ ಬಣ್ಣದ ಹೋರಿ ಕರುವಿಗೆ ಜನ್ಮ ನೀಡಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಮಾಲೀಕರು ತಮ್ಮ ಜಮೀನಿನಲ್ಲಿ ಎಮ್ಮೆ ಹಾಗೂ ಹೋರಿಯನ್ನು ಒಂದೇ ಕಡೆ ಕಟ್ಟಿಹಾಕುತ್ತಿದ್ದರು ಎಂದು ತಿಳಿದುಬಂದಿದೆ. ಹೋರಿಯ ಸಂಪರ್ಕದಿಂದಲೇ ಈ ವಿಭಿನ್ನ ಕರು ಜನಿಸಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅಪರೂಪದ ಈ ಬಿಳಿ ಬಣ್ಣದ ಹೋರಿ ಕರುವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬೀಳುತ್ತಿದ್ದು, ಇದು ಈಗ ಎಲ್ಲೆಡೆ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

- Advertisement -

Latest News

error: Content is protected !!