- Advertisement -
- Advertisement -
ಮಂಗಳೂರು: ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ವಾಗತಿಸಿದ್ದಾರೆ.
ರಾಜ್ಯದಲ್ಲಿ 254 ಔಷಧ ತಯಾರಿಕಾ ಕಂಪನಿಗಳ ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ಈ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇದೀಗ 137 ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭಾಂಶದ ಮೇಲೆ ಗರಿಷ್ಠ ಶೇ. 30ರ ಮಿತಿ ವಿಧಿಸಲಾಗಿದೆ. ಹೊಸ ದರಗಳು ನವೆಂಬರ್ 9ರಿಂದ ಜಾರಿಗೆ ಬರಲಿದ್ದು, ಇದರಿಂದ ಔಷಧಗಳ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ.
ದುಬಾರಿ ಔಷಧಗಳಿಂದಾಗಿ ಯಾವುದೇ ರೋಗಿಯೂ ಚಿಕಿತ್ಸೆ ನಿಲ್ಲಿಸುವಂತಾಗಬಾರದು. ಎಲ್ಲರಿಗೂ ಕೈಗೆಟುಕುವ ದರದಲ್ಲಿ ಔಷಧಗಳು ಲಭ್ಯವಾಗಬೇಕು ಎಂದು ಖಾದರ್ ಹೇಳಿದ್ದಾರೆ.
- Advertisement -


