Friday, October 9, 2026
Homeಕರಾವಳಿಮೂಡುಬಿದಿರೆಯಲ್ಲಿ ಜನವರಿ 6ರಿಂದ 10ರವರೆಗೆ ಆಳ್ವಾಸ್ ವಿರಾಸತ್ ಮತ್ತು ನುಡಿಸಿರಿ ಸಾಂಸ್ಕೃತಿಕ ಉತ್ಸವ

ಮೂಡುಬಿದಿರೆಯಲ್ಲಿ ಜನವರಿ 6ರಿಂದ 10ರವರೆಗೆ ಆಳ್ವಾಸ್ ವಿರಾಸತ್ ಮತ್ತು ನುಡಿಸಿರಿ ಸಾಂಸ್ಕೃತಿಕ ಉತ್ಸವ

- Advertisement -
- Advertisement -

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 2027ರ ಜನವರಿ 6ರಿಂದ 10ರವರೆಗೆ ಮೂಡುಬಿದಿರೆಯಲ್ಲಿ ‘ಆಳ್ವಾಸ್ ವಿರಾಸತ್’ ಮತ್ತು ‘ಆಳ್ವಾಸ್ ನುಡಿಸಿರಿ’ ಸಾಂಸ್ಕೃತಿಕ ಉತ್ಸವಗಳು ಜಂಟಿಯಾಗಿ ನಡೆಯಲಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.

‘ಕನ್ನಡ ಮನಸ್ಸು: ಭವಿಷ್ಯದ ಕನಸು’ ಎಂಬ ಪರಿಕಲ್ಪನೆಯಡಿ ನಡೆಯುವ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ಉದ್ಘಾಟಕರಾಗಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಭಾಗವಹಿಸಲಿದ್ದಾರೆ.

ಜನವರಿ 6ರಂದು ವಿರಾಸತ್ ಉದ್ಘಾಟನೆಗೊಳ್ಳಲಿದ್ದು, ಶಾಸ್ತ್ರೀಯ ಮತ್ತು ಜನಪದ ಕಲಾ ಕ್ಷೇತ್ರಗಳ ಇಬ್ಬರು ಸಾಧಕರಿಗೆ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೆ ಸಂಗೀತ, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

- Advertisement -

Latest News

error: Content is protected !!