- Advertisement -
- Advertisement -
ಉಡುಪಿ: ನಗರದ ಬೀಡಿನಗುಡ್ಡೆ ಹುಲ್ಲಿಕೇರಿ ನಿವಾಸಿ ಐಶ್ವರ್ಯ (18) ಎಂಬ ಯುವತಿ ನಾಪತ್ತೆಯಾಗಿದ್ದು, ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸರು ಕೋರಿದ್ದಾರೆ.
ಮನೆಗೆಲಸ ಮಾಡಿಕೊಂಡಿದ್ದ ಈಕೆ ಸೆಪ್ಟೆಂಬರ್ 28ರಂದು ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿಲ್ಲ. 4 ಅಡಿ 10 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹಾಗೂ ಸಾಧಾರಣ ಶರೀರ ಹೊಂದಿರುವ ಈಕೆ ಕನ್ನಡ ಮಾತನಾಡುತ್ತಾರೆ.
ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಉಡುಪಿ ನಗರ ಪೊಲೀಸ್ ಠಾಣೆ (0820-2520444), ಕಂಟ್ರೋಲ್ ರೂಂ (0820-2526444), ಪೊಲೀಸ್ ಇನ್‌ಸ್ಪೆಕ್ಟರ್ (9480805408) ಅಥವಾ PSI (9080805445) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
- Advertisement -


