Wednesday, October 7, 2026
Homeಕರಾವಳಿಮಂಗಳೂರುಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ ಸೌತಡ್ಕ ಕ್ಷೇತ್ರದಲ್ಲಿ ಅಭಿನಂದನೆ

ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ ಸೌತಡ್ಕ ಕ್ಷೇತ್ರದಲ್ಲಿ ಅಭಿನಂದನೆ

- Advertisement -
- Advertisement -

ಬೆಳ್ತಂಗಡಿ: ಅಖಿಲ ಭಾರತ ಒಕ್ಕಲಿಗರ ಮಹಾಸಭಾ ಮತ್ತು ಒಕ್ಕಲಿಗರ ಪರಿಷತ್ತು ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪಡೆದ ಸಮಾಜ ಸೇವಕಿ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಲೋಕೇಶ್ವರಿ ವಿನಯಚಂದ್ರ ಅವರಿಗೆ ಅ.7 ರಂದು ವ್ಯವಸ್ಥಾಪನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಭಾರಯ, ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲುರಾಯ, ಸದಸ್ಯರಾದ ವಿಶ್ವನಾಥ್ ಪೂಜಾರಿ ಕೊಲ್ಲಜೆ, ಪ್ರಮೋದ್ ರೈ ರೆಖ್ಯಾ, ಗಣೇಶ್ ಕಾಶಿ, ಹರಿಶ್ಚಂದ್ರ, ಪ್ರಶಾಂತ್ ಮಚ್ಚಿನ, ಉಪಸ್ಥಿತರಿದ್ದರು.

- Advertisement -

Latest News

error: Content is protected !!