Monday, October 5, 2026
Homeಕರಾವಳಿಮಂಗಳೂರುಕಡಬ: ಕೈಪನಡ್ಕದಲ್ಲಿ ಗಲಾಟೆ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿ – ನಾಲ್ವರ ವಿರುದ್ಧ ಪ್ರಕರಣ ದಾಖಲು

ಕಡಬ: ಕೈಪನಡ್ಕದಲ್ಲಿ ಗಲಾಟೆ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿ – ನಾಲ್ವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಕಡಬ: ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಿ, ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶ ಮೂಲದ ಯಾತ್ರಾರ್ಥಿಗಳು ಕೈಪನಡ್ಕದ ರಸ್ತೆ ಬದಿಯ ತೋಟದಲ್ಲಿದ್ದ ಅಡಕೆ ಹಾಗೂ ತೆಂಗಿನ ಸಸಿಗಳನ್ನು ಕಿತ್ತುಕೊಂಡಿದ್ದರೆನ್ನಲಾಗಿದೆ. ಇದನ್ನು ಸ್ಥಳೀಯರಾದ ಮೇಹಿ ಜಾರ್ಜ್ ಹಾಗೂ ಜಾನ್ಸನ್ ಪ್ರಶ್ನಿಸಿ ತಡೆದಾಗ, ಇತ್ತಂಡಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಗಲಾಟೆ ಸಂಭವಿಸಿದೆ.

ರಸ್ತೆಯಲ್ಲಿ ಗಲಾಟೆಯಿಂದಾಗಿ ಸಾರ್ವಜನಿಕರಿಗೆ ಹಾಗೂ ಸುಗಮ ವಾಹನ ಸಂಚಾರಕ್ಕೆ ಅಡಚಣೆಯುಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯರಾದ ಮೇಹಿ ಜಾರ್ಜ್, ಜಾನ್ಸನ್ ಹಾಗೂ ಆಂಧ್ರಪ್ರದೇಶದ ರಾಜಾಪಳ್ಳಿ ಹರ್ಷವರ್ಧನ, ಕುಡೂರು ಯೋಗಾನಂದ ಅಲಿಯಾಸ್ ರಾಮಚಂದ್ರ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!