Monday, October 5, 2026
Homeಕರಾವಳಿಮಂಗಳೂರುಮಂಗಳೂರು: ಕರಾವಳಿಯಲ್ಲಿ ಭಾರಿ ಮಳೆ, ಸಾರ್ವಜನಿಕರ ಪರದಾಟ

ಮಂಗಳೂರು: ಕರಾವಳಿಯಲ್ಲಿ ಭಾರಿ ಮಳೆ, ಸಾರ್ವಜನಿಕರ ಪರದಾಟ

- Advertisement -
- Advertisement -

ಮಂಗಳೂರು : ಮುಂಗಾರು ಋತು ಮುಗಿಯುವ ಹಂತದಲ್ಲಿದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಬೆಳಗಿನ ಜಾವದಿಂದಲೇ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಪ್ರಾರಂಭವಾಗಿದೆ. ಇಡೀ ವಾತಾವರಣ ಕತ್ತಲೆಯಿಂದ ಆವೃತವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತೀವ್ರ ತೊಂದರೆ ಅನುಭವಿಸಿದರು.

ಹಲವೆಡೆ ಬಿರುಗಾಳಿಯಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ತಗ್ಗು ಪ್ರದೇಶ ಹಾಗೂ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

- Advertisement -

Latest News

error: Content is protected !!