- Advertisement -
- Advertisement -
ಮಂಗಳೂರು: ಮಂಗಳೂರು ದಸರಾ ವೈಭವದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ಎರಡು ದಿನಗಳ ಕಾಲ ವಿಸ್ತರಿಸುವಂತೆ ಶಾಸಕ ವೇದವ್ಯಾಸ ಕಾಮತ್ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ಅಕ್ಟೋಬರ್ 3 ರಿಂದ 21 ರವರೆಗೆ ಶಾಲಾ ರಜೆ ಘೋಷಿಸಲಾಗಿದೆ. ಆದರೆ, ಕುದ್ರೋಳಿ ಗೋಕರ್ಣನಾಥೇಶ್ವರ, ಮಂಗಳಾದೇವಿ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ಅಕ್ಟೋಬರ್ 23 ರ ಮುಂಜಾನೆಯವರೆಗೂ ಹಬ್ಬದ ವಾತಾವರಣವಿರುತ್ತದೆ. ಕುಟುಂಬ ಸಮೇತರಾಗಿ ಭಾಗವಹಿಸುವ ಭಕ್ತರ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಒತ್ತಡವಿಲ್ಲದೆ ಹಬ್ಬ ಆಚರಿಸಲು ರಜೆ ವಿಸ್ತರಿಸಬೇಕು ಎಂದು ಅವರು ಕೋರಿದ್ದಾರೆ. ಪದವಿ ಹಂತದವರೆಗೂ ರಜೆ ನೀಡುವಂತೆ ಮನವಿ ಮಾಡಿರುವ ಶಾಸಕರು, ಹಿಂದಿನ ಹಬ್ಬಗಳಂತೆ ಈ ಬಾರಿಯೂ ನಿರ್ಲಕ್ಷ್ಯ ವಹಿಸಬಾರದು ಎಂದು ಆಗ್ರಹಿಸಿದ್ದಾರೆ.
- Advertisement -


