- Advertisement -
- Advertisement -
ಉಡುಪಿ; ಮಗಳ ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸುವುದಾಗಿ ಕರೆದುಕೊಂಡು ಹೋದ ತಂದೆ ಹಾಗೂ 5 ವರ್ಷದ ಮಗಳು ನಾಪತ್ತೆಯಾಗಿರುವ ಘಟನೆ ಕಾಪು ತಾಲೂಕಿನ ಕಲ್ಯಾ ಉಳಿಯಾರಗೋಳಿ ಗ್ರಾಮದ ಭರತ್ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ದಿನೇಶ್ ಶೆಟ್ಟಿಗಾರ (45) ಹಾಗೂ ಅವರ ಮಗಳು ನಾಪತ್ತೆಯಾದವರು.
ಸೆಪ್ಟೆಂಬರ್ 25ರಂದು ಸಂಜೆ 4 ಗಂಟೆಗೆ ದಿನೇಶ್ ಅವರು ಮಗಳನ್ನು ಬಟ್ಟೆ ಕೊಡಿಸಲು ಕರೆದುಕೊಂಡು ಹೋಗಿದ್ದರು. ಆದರೆ ತಂದೆ-ಮಗಳು ಮನೆಗೆ ವಾಪಸ್ ಬಂದಿಲ್ಲ. ಪತ್ನಿ ಶಿಲ್ಪಾ ಅವರು ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ.
ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ, ಪತ್ನಿ ಶಿಲ್ಪಾ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


