Friday, September 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟದ ಕಚೇರಿ ಉದ್ಘಾಟನೆ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟದ ಕಚೇರಿ ಉದ್ಘಾಟನೆ

- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.28 ರಿಂದ ಅ.4ರ ವರೆಗೆ ನಡೆಯುವ ಭಜನಾ ಕಮ್ಮಟದ ಮೇಲುಸ್ತುವಾರಿಯನ್ನು ನೋಡಿಕೊಳ್ಳುವ ಸಲುವಾಗಿ ಮಹೋತ್ಸವದ ಸಭಾ ಭವನದಲ್ಲಿ ಕಚೇರಿಯನ್ನು ಪ್ರಾರಂಭಿಸಲಾಯಿತು.

ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಶ್ರೀಯುತ ಸುಬ್ರಮಣ್ಯಪ್ರಸಾದ್ ರವರು ಕಮ್ಮಟದ ಯಶಸ್ವಿಗೆ ಶ್ರೀ ಮಂಜುನಾಥ ಸ್ವಾಮಿಗೆ, ಚಂದ್ರನಾಥ ಸ್ವಾಮಿಗೆ, ಅಣ್ಣಪ್ಪನಿಗೆ ಹಾಗೂ ಎಲ್ಲ ಧರ್ಮದೇವತೆಗಳಿಗೆ ಪ್ರಾರ್ಥಿಸಿದ ನಂತರ  ಪೂಜ್ಯ ಖಾವಂದರ ಆಪ್ತ ಕಾರ್ಯದರ್ಶಿಗಳಾದ ಶ್ರೀಯುತ ವೀರು ಶೆಟ್ಟಿಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಚೇರಿಯನ್ನು ಸೆ.25 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರು, ಕಮ್ಮಟ ಸಮಿತಿಯ ಪದಾಧಿಕಾರಿಗಳು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!