- Advertisement -
- Advertisement -
ಕಥುವಾ: ಪಾಕ್ ಮೂಲದ ಏಜೆನ್ಸಿಗೆ ಸೂಕ್ಷ್ಮ ವೀಡಿಯೊ ದೃಶ್ಯಾವಳಿಗಳನ್ನು ರವಾನಿಸಿದ ಆರೋಪದ ಮೇಲೆ 24 ವರ್ಷದ ಟ್ರಕ್ ಚಾಲಕ ಅಮಾನ್‌ನನ್ನು ಜಮ್ಮುಕಾಶ್ಮೀರದ ಕಥುವಾದಲ್ಲಿ ಶುಕ್ರವಾರ ಬಂಧಿಸಲಾಗಿದೆ.
ಸೇನಾ ಸಂಸ್ಥಾಪನೆಗಳ ಸ್ಥಳ ಪರಿಶೀಲನೆ ನಡೆಸಿ, ಸೂಕ್ಷ್ಮ ಮಾಹಿತಿಗಳು ಹಾಗೂ ಛಾಯಾಚಿತ್ರಗಳನ್ನು ಪಾಕ್ ಏಜೆಂಟರಿಗೆ ರವಾನಿಸಲು ಯತ್ನಿಸಿದ ಆರೋಪ ಅಮಾನ್ ಮೇಲಿದ್ದು, ಹನಿಟ್ರ್ಯಾಪ್‌ಗೆ ಒಳಗಾದ ಬಳಿಕ ಆತ ಈ ಚಟುವಟಿಕೆಗಳಲ್ಲಿ ತೊಡಗಿದ್ದನೆಂದು ಮೂಲಗಳು ತಿಳಿಸಿವೆ.
ಗಡಿ ಸಮೀಪದ ರಸ್ತೆಗಳ ಮೇಲೆ ನಿಗಾ ವಹಿಸಲು ತನ್ನ ಮನೆಯ ಹೊರಭಾಗದಲ್ಲಿ ಸಿಮ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದನೆಂಬ ಆರೋಪವೂ ಆತನ ಮೇಲಿದೆ.
- Advertisement -


