Friday, September 18, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಯುವ ಕ್ರಿಯೇಟರ್‌ಗಳ ಜೊತೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ: ಸ್ಥಳೀಯ ತಿನಿಸು ಸವಿದು ಮಾತುಕತೆ

ಮಂಗಳೂರಿನಲ್ಲಿ ಯುವ ಕ್ರಿಯೇಟರ್‌ಗಳ ಜೊತೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ: ಸ್ಥಳೀಯ ತಿನಿಸು ಸವಿದು ಮಾತುಕತೆ

- Advertisement -
- Advertisement -

ಮಂಗಳೂರು: ನಗರದ ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನ ಯುವ ಸೃಜನಶೀಲರೊಂದಿಗೆ (ಕ್ರಿಯೇಟರ್ಸ್‌) ಬೆಳಗಿನ ಸಂವಾದ ನಡೆಸಿದರು.

ಸಂವಾದದ ವೇಳೆ ಯುವ ಜನಾಂಗದ ಸೃಜನಶೀಲ ಆಲೋಚನೆಗಳು, ಮಂಗಳೂರಿನ ಅಭಿವೃದ್ಧಿಯ ದೃಷ್ಟಿಕೋನ ಹಾಗೂ ಕರಾವಳಿ ಭಾಗದಲ್ಲಿ ಯುವಕರಿಗೆ ಇರುವ ಅವಕಾಶಗಳ ಕುರಿತು ಮುಕ್ತವಾಗಿ ಚರ್ಚಿಸಲಾಯಿತು. ನಗರದ ಯುವಕರ ಭವಿಷ್ಯದ ಕನಸುಗಳನ್ನು ಆಲಿಸಿದ ಅವರು, ಯುವ ಶಕ್ತಿಯ ಹೊಸ ಆಲೋಚನೆಗಳಿಗೆ ಪ್ರೋತ್ಸಾಹ ನೀಡುವ ಇಚ್ಛೆ ವ್ಯಕ್ತಪಡಿಸಿದರು.

ಇದೇ ವೇಳೆ ಮಂಗಳೂರಿನ ಸಾಂಪ್ರದಾಯಿಕ ಆಹಾರ ಸಂಸ್ಕೃತಿಗೆ ಮನಸೋತ ಅವರು, ಕರಾವಳಿಯ ಪ್ರಸಿದ್ಧ ತಿಂಡಿಗಳಾದ ಮಂಗಳೂರು ಬನ್ಸ್, ಗೋಳಿ ಬಜೆ ಹಾಗೂ ಶಾವಿಗೆ ರಸಾಯನವನ್ನು ಸವಿದರು. ಸ್ಥಳೀಯ ಸೊಗಡಿನ ರುಚಿಯೊಂದಿಗೆ ನಡೆದ ಈ ಕಾರ್ಯಕ್ರಮವು ಮಂಗಳೂರಿನ ಸಾಂಪ್ರದಾಯಿಕ ವೈಶಿಷ್ಟ್ಯತೆ, ಯುವ ಚಿಂತನೆ ಹಾಗೂ ಕರಾವಳಿ ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ.

- Advertisement -

Latest News

error: Content is protected !!