- Advertisement -
- Advertisement -
ಮಂಗಳೂರು: ಪಣಂಬೂರಿನಲ್ಲಿ ವಲಸೆ ಕಾರ್ಮಿಕನಿಗೆ ಕಬ್ಬಿಣದ ರಾಡ್ ತೋರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 25,000 ರೂ. ದಂಡ ವಿಧಿಸಿದೆ.ಕೆಂಜಾರ್‌ನ ಜಾವಿದ್ ಅಖ್ತರ್ (28) ಮತ್ತು ಬೆಂಗ್ರೆಯ ತೋಯಿದ್ ಖಾದರ್ (24) ಶಿಕ್ಷೆಗೆ ಒಳಗಾದವರು.
ಘಟನೆ ಹಿನ್ನೆಲೆ: 2020ರ ನವೆಂಬರ್ 16ರಂದು ಪಣಂಬೂರಿನಲ್ಲಿ ಬಿಹಾರ ಮೂಲದ ಕಾರ್ಮಿಕ ಗೋವಿಂದ್ ಕುಮಾರ್ ಅವರಿಗೆ ಸ್ಕೂಟರ್‌ನಲ್ಲಿ ಬಂದ ಆರೋಪಿಗಳು ಬೆದರಿಸಿ 5,000 ರೂ. ಮೌಲ್ಯದ ಮೊಬೈಲ್ ಕಸಿದುಕೊಂಡಿದ್ದರು.
ಪಣಂಬೂರು ಇನ್ಸ್‌ಪೆಕ್ಟರ್ ಅಜ್ಮತ್ ಅಲಿ ಮರುದಿನವೇ ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಜೆ.ಎಸ್. ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಭದರಿನಾಥ ನೈಯಾರಿ ವಾದ ಮಂಡಿಸಿದ್ದರು.
- Advertisement -


