- Advertisement -
- Advertisement -
ಕಾಸರಗೋಡು: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯ ಸರ ಕದಿಯಲು ಯತ್ನಿಸಿದ ತಮಿಳುನಾಡು ಮೂಲದ ಕಿಲಾಡಿ ಕಳ್ಳಿಯನ್ನು ಸಾರ್ವಜನಿಕರು ಹಿಡಿದು ಮಂಜೇಶ್ವರ ಪೊಲೀಸರಿಗೊಪ್ಪಿಸಿದ ಘಟನೆ ಹೊಸಂಗಡಿಯಲ್ಲಿ ಭಾನುವಾರ ನಡೆದಿದೆ.
ಮಧುರೈ ಮೂಲದ ಮುತ್ತಾತ್ತ (40) ಬಂಧಿತ ಆರೋಪಿ. ಮಂಗಳೂರಿನಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮದುವೆ ಸಮಾರಂಭ ಮುಗಿಸಿ ಹೊಸಂಗಡಿಗೆ ಬರುತ್ತಿದ್ದ ಬಂಗ್ರಮಂಜೇಶ್ವರದ ಪ್ರೇಮಾ (77) ಎಂಬುವವರ 3 ಪವನ್ ಚಿನ್ನದ ಸರವನ್ನು ಈಕೆ ಬಸ್ಸಿನಿಂದ ಇಳಿಯುವಾಗ ಕತ್ತರಿಸಲು ಯತ್ನಿಸಿದ್ದಳು. ಇದನ್ನು ಗಮನಿಸಿದ ಸಹಪ್ರಯಾಣಿಕ ಯುವತಿಯೊಬ್ಬರು ತಕ್ಷಣ ಎಚ್ಚರಿಸಿದ್ದು, ಕೂಡಲೇ ಸ್ಥಳೀಯರು ಮತ್ತು ಪ್ರಯಾಣಿಕರು ಆರೋಪಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಮಹಿಳೆಯ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
- Advertisement -


