Saturday, September 5, 2026
Homeಕರಾವಳಿಭಜನೆ ಮಾಡುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಯುವಕ ಸಾವು

ಭಜನೆ ಮಾಡುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಯುವಕ ಸಾವು

- Advertisement -
- Advertisement -

ಹಳೆಯಂಗಡಿ: ತೋಕೂರು ಸುಬ್ರಮಣ್ಯ ದೇವಸ್ಥಾನದಲ್ಲಿ ಕೃಷ್ಣಾಷ್ಟಮಿ ಅಂಗವಾಗಿ ಆಯೋಜಿಸಲಾಗಿದ್ದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಜನೆ ಹಾಡುತ್ತಿದ್ದ ಯುವಕರೊಬ್ಬರು ಸಭಾಂಗಣದಲ್ಲೇ ಕುಸಿದುಬಿದ್ದು ಹೃದಯಾಘಾತದಿಂದ ನಿಧನರಾದ ದಾರುಣ ಘಟನೆ ಶುಕ್ರವಾರ (ಸೆ.04) ತಡರಾತ್ರಿ ಸಂಭವಿಸಿದೆ.

ತೋಕೂರು ನಿವಾಸಿ ಶ್ರೀನಾಥ್ ಶೆಟ್ಟಿಗಾರ್ (38) ಮೃತಪಟ್ಟ ದುರದೃಷ್ಟಕರ ಯುವಕ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಶ್ರೀನಾಥ್, ಅಷ್ಟಮಿ ಹಬ್ಬದ ಆಚರಣೆಗಾಗಿ ಊರಿಗೆ ಬಂದಿದ್ದರು. ಸ್ಥಳೀಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಇವರ ಅಕಾಲಿಕ ಮರಣವು ಇಡೀ ಗ್ರಾಮದಲ್ಲಿ ತೀವ್ರ ಕಂಬನಿ ಮಿಡಿಯುವಂತೆ ಮಾಡಿದೆ.

- Advertisement -

Latest News

error: Content is protected !!