Saturday, September 5, 2026
Homeತಾಜಾ ಸುದ್ದಿಹಾಲಿಗಾಗಿ ಪೋಸ್ಟರ್ ನೆಕ್ಕುತ್ತಿರುವ ಪುಟ್ಟ ಕರು… ಕರುಳು ಹಿಂಡುವ ವೀಡಿಯೋ ವೈರಲ್ !

ಹಾಲಿಗಾಗಿ ಪೋಸ್ಟರ್ ನೆಕ್ಕುತ್ತಿರುವ ಪುಟ್ಟ ಕರು… ಕರುಳು ಹಿಂಡುವ ವೀಡಿಯೋ ವೈರಲ್ !

- Advertisement -
- Advertisement -

ತನ್ನ ಅಮ್ಮನಿಗಾಗಿ ಹುಡುಕಾಡುತ್ತಿರುವ ಈ ಪುಟ್ಟ ಕರು… ಇಂದು ಇಡೀ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ದೊಡ್ಡ ಪ್ರಶ್ನೆಯೊಂದನ್ನು ಕೇಳುತ್ತಿದೆ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ವೀಡಿಯೋದಲ್ಲಿ ರಸ್ತೆ ಬದಿ ನಿಂತಿದ್ದ ಹಾಲಿನ ಟ್ರಕ್ ಮೇಲಿದ್ದ ಹಸುವಿನ ಚಿತ್ರವನ್ನೇ ನಿಜವಾದ ಅಮ್ಮ ಅಂತ ಭಾವಿಸಿದೆ.

ತನ್ನ ಪುಟ್ಟ ಕಾಲುಗಳ ಮೇಲೆ ನಿಂತು, ಆ ಪೋಸ್ಟರ್‌ನಿಂದಲೇ ಹಾಲು ಕುಡಿಯೋಕೆ ವ್ಯರ್ಥ ಪ್ರಯತ್ನ ಮಾಡ್ತಿದೆ. ಅಮ್ಮನ ಒಂದು ಬೆಚ್ಚಗಿನ ಅಪ್ಪುಗೆ ಸಿಗುತ್ತಾ? ಕನಿಷ್ಠ ಒಂದೆರಡು ಹನಿ ಹಾಲಾದರೂ ಸಿಗಬಹುದಾ ಅಂತ ಆ ಚಿತ್ರಕ್ಕೇ ತನ್ನ ಮುಖ ಉಜ್ಜುತ್ತಾ ನಿಂತಿದೆ… ಆದರೆ ಅಲ್ಲಿ ಸಿಕ್ಕಿದ್ದು ಬರಿ ನಿರಾಸೆ ಮಾತ್ರ!

ಡೈರಿ ಉದ್ಯಮದ ಸ್ವಾರ್ಥವೋ ಅಥವಾ ಮನುಷ್ಯನ ನಿರ್ಲಕ್ಷ್ಯವೋ… ಹುಟ್ಟಿದ ಕ್ಷಣವೇ ತಾಯಿಯಿಂದ ದೂರಾಗುವ ಈ ಕರುಗಳ ನೋವು ಎಷ್ಟು ಭೀಕರ? ಅಮ್ಮ ಇಲ್ಲದ ಬದುಕು ಎಷ್ಟು ಶೂನ್ಯ ಎಂಬುದನ್ನು, ಈ ಪುಟ್ಟ ಜೀವ ಒಂದೇ ಒಂದು ಮಾತನ್ನಾಡದೇ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ!

- Advertisement -

Latest News

error: Content is protected !!