- Advertisement -
- Advertisement -
ದೇವನಹಳ್ಳಿ: ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಮಹಮ್ಮದ್ ಸಿರಾಜ್ ಎಂಬ ಪ್ರಯಾಣಿಕ, ಬಾಯಿಯಲ್ಲಿ 82 ಗ್ರಾಂ ಚಿನ್ನದ ಕ್ಯಾಪ್ಸೂಲ್ಗಳನ್ನು ಅಡಗಿಸಿಟ್ಟು ತರಲು ಯತ್ನಿಸಿ ಸಿಐಎಸ್ಎಫ್ (CISF) ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರಿನಿಂದ ಗಾಜಿಯಾಬಾದ್ಗೆ ತೆರಳಲು ಸಜ್ಜಾಗುತ್ತಿದ್ದ ಈತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲಿಸಿದರು. ಬಾಡಿ ಸ್ಕ್ಯಾನರ್ಗೆ ಸಿಗದಂತೆ ಮುನ್ನೆಚ್ಚರಿಕೆ ವಹಿಸಿ ಬಾಯಿಯಲ್ಲಿ ಇಟ್ಟುಕೊಂಡಿದ್ದ 2 ಚಿನ್ನದ ಕ್ಯಾಪ್ಸೂಲ್ಗಳು ತಪಾಸಣೆ ವೇಳೆ ಪತ್ತೆಯಾಗಿದ್ದು, ಪ್ರಸ್ತುತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಕೆಐಎ (KIA) ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
- Advertisement -


