Thursday, September 3, 2026
HomeWorldದೋಹಾ-ಬೆಂಗಳೂರು ಇಂಡಿಗೋ ವಿಮಾನ ಮಸ್ಕತ್‌ ನಲ್ಲಿ ತುರ್ತು ಲ್ಯಾಂಡಿಂಗ್; ಪೈಲಟ್ ದಿಢೀರ್ ಅಸ್ವಸ್ಥ

ದೋಹಾ-ಬೆಂಗಳೂರು ಇಂಡಿಗೋ ವಿಮಾನ ಮಸ್ಕತ್‌ ನಲ್ಲಿ ತುರ್ತು ಲ್ಯಾಂಡಿಂಗ್; ಪೈಲಟ್ ದಿಢೀರ್ ಅಸ್ವಸ್ಥ

- Advertisement -
- Advertisement -

ದೋಹಾದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ಸಂಸ್ಥೆಯ ‘6E 1302’ ವಿಮಾನದ ಪೈಲಟ್ ದಿಢೀರ್ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ, ವಿಮಾನವನ್ನು ಒಮಾನ್‌ನ ಮಸ್ಕತ್ ವಿಮಾನ ನಿಲ್ದಾಣಕ್ಕೆ ತುರ್ತು ಮಾರ್ಗ ಬದಲಾಯಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.

ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ವೈದ್ಯಕೀಯ ತಂಡವು ಪೈಲಟ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಮಸ್ಕತ್‌ನಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಅಗತ್ಯ ಉಪಹಾರ ಮತ್ತು ಸೂಕ್ತ ಮಾಹಿತಿಯನ್ನು ಒದಗಿಸಿದ ಇಂಡಿಗೋ, ಅವರ ಮುಂದಿನ ಪ್ರಯಾಣಕ್ಕಾಗಿ ತಕ್ಷಣವೇ ಪರ್ಯಾಯ ವಿಮಾನ ಹಾಗೂ ಹೊಸ ಸಿಬ್ಬಂದಿಯ ವ್ಯವಸ್ಥೆ ಮಾಡಿದೆ ಎಂದು ತಿಳಿಸು ಬಂದಿದೆ.

ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ತಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿರುವ ಇಂಡಿಗೋ ಸಂಸ್ಥೆಯು, ಈ ಆಕಸ್ಮಿಕ ಘಟನೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.

- Advertisement -

Latest News

error: Content is protected !!