- Advertisement -
- Advertisement -
ಮಂಗಳೂರು: ನಗರದ ಕಲಾಸಾಧನ ಸಂಸ್ಥೆಯು ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಸೆಪ್ಟೆಂಬರ್ 6 ರಂದು ಸಂಜೆ 5 ಗಂಟೆಗೆ ಮಂಗಳಾದೇವಿ ಬಳಿಯ ಶ್ರೀರಾಮಕೃಷ್ಣ ಮಠದಲ್ಲಿ ‘ರಾಗ ಸುಧಾ’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಶ್ರೀರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಳಿಕ ಗಣ್ಯರಿಗೆ ಹಾಗೂ ಕಲಾವಿದರಿಗೆ ಸನ್ಮಾನ ನೆರವೇರಲಿದೆ.
ಭಾಗವಹಿಸುವ ಮುಖ್ಯ ಕಲಾವಿದರು:
- ಆದಿತ್ಯ ಮೋದಕ್: ಗ್ವಾಲಿಯರ್ ಘರಾನಾದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯ ಹಾಗೂ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದ ಪುರಸ್ಕಾರ ಪಡೆದ ಖ್ಯಾತ ಗಾಯಕ.
- ಸತೀಶ್ ಭಟ್ ಹೆಗ್ಗಾರ್: ಗ್ವಾಲಿಯರ್ ಕಿರಾಣಾ ಪದ್ಧತಿಯ ಗಾಯಕ, ಹಾರ್ಮೋನಿಯಂ ವಾದಕ ಹಾಗೂ ‘ಗಾನಯೋಗಿ’ ಚಲನಚಿತ್ರದ ನಟ.
- ಅಕ್ಷಯ ಜೋಶಿ: ಧಾರವಾಡದ ಡಾ. ಪಂಡಿತ್ ರವಿಕಿರಣ್ ನಕೋಡ್ ಅವರ ಶಿಷ್ಯ ಹಾಗೂ ಹಲವು ಪ್ರಶಸ್ತಿ ವಿಜೇತ ತಬಲಾ ವಾದಕ.

ಕಳೆದ 10 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಪ್ರಚಾರ ಹಾಗೂ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವ ‘ಕಲಾಸಾಧನ’ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಈ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
- Advertisement -


