Wednesday, September 2, 2026
Homeತಾಜಾ ಸುದ್ದಿಕೇರಳ; ಡೈಪರ್‌ನಲ್ಲಿ ಬಚ್ಚಿಟ್ಟು ಚಿನ್ನ ಕಳ್ಳಸಾಗಣೆ: 8 ತಿಂಗಳ ಮಗುವನ್ನು ಅಪರಾಧಕ್ಕಾಗಿ ಬಳಸಿಕೊಂಡ ಖದೀಮರು

ಕೇರಳ; ಡೈಪರ್‌ನಲ್ಲಿ ಬಚ್ಚಿಟ್ಟು ಚಿನ್ನ ಕಳ್ಳಸಾಗಣೆ: 8 ತಿಂಗಳ ಮಗುವನ್ನು ಅಪರಾಧಕ್ಕಾಗಿ ಬಳಸಿಕೊಂಡ ಖದೀಮರು

- Advertisement -
- Advertisement -

ತಪಾಸಣೆಯಿಂದ ಬಚಾವ್ ಆಗಲು 8 ತಿಂಗಳ ಕಂದಮ್ಮನನ್ನು ಚಿನ್ನ ಕಳ್ಳಸಾಗಣೆಗೆ ಬಳಸಿಕೊಂಡ ಅಚ್ಚರಿಯ ಘಟನೆ ಕರಿಪುರದ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಗುವಿನ ಡೈಪರ್ ಹಾಗೂ ಪ್ರಯಾಣಿಕನಿಂದ ಒಟ್ಟು ₹1 ಕೋಟಿ ಮೌಲ್ಯದ 1 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ರಾಸ್ ಅಲ್ ಖೈಮಾದಿಂದ ಕುಟುಂಬ ಸಮೇತ ಬಂದಿಳಿದ ಪೊನ್ನಾನಿ ಮೂಲದ ವ್ಯಕ್ತಿಯನ್ನು ಖಚಿತ ಮಾಹಿತಿ ಆಧರಿಸಿ ತಡೆದ ಡಿಆರ್‌ಐ ತಂಡ, ತೀವ್ರ ತಪಾಸಣೆ ನಡೆಸಿತು. ಈ ವೇಳೆ 8 ತಿಂಗಳ ಮಗುವಿನ ಡೈಪರ್‌ನಲ್ಲಿ ₹50 ಲಕ್ಷ ಮೌಲ್ಯದ 500 ಗ್ರಾಂ ಚಿನ್ನ ಪತ್ತೆಯಾಗಿದ್ದರೆ, ಮಗುವಿನ ತಂದೆಯ ಬಳಿ ಉಳಿದ 500 ಗ್ರಾಂ ಚಿನ್ನ ಪತ್ತೆಯಾಗಿದೆ. ತಪಾಸಣೆಯಿಂದ ತಪ್ಪಿಸಿಕೊಳ್ಳಲು ಕಳ್ಳಸಾಗಣೆ ಜಾಲಗಳು ಪುಟ್ಟ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದ್ದು, ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಇದೇ ವಿಮಾನ ನಿಲ್ದಾಣದ ಮತ್ತೊಂದು ಕಾರ್ಯಾಚರಣೆಯಲ್ಲಿ ಗಲ್ಫ್‌ನಿಂದ ಬಂದಿದ್ದ ಪ್ರಯಾಣಿಕನೊಬ್ಬ ಕಾಫಿ ಮೇಕಿಂಗ್ ಯಂತ್ರದೊಳಗೆ ಅಡಗಿಸಿಟ್ಟಿದ್ದ 1 ಕೆಜಿ ಚಿನ್ನವನ್ನು ಡಿಆರ್‌ಐ ವಶಪಡಿಸಿಕೊಂಡಿದೆ.

- Advertisement -

Latest News

error: Content is protected !!