- Advertisement -
- Advertisement -
ಮಂಗಳೂರು: ಕರಂಬಾರು ಪೆಟ್ರೋಲ್ ಪಂಪ್ ಬಳಿಯ ಸೇತುವೆ ಇದ್ದಕ್ಕಿದ್ದಂತೆ ಕುಸಿದ ಹಿನ್ನೆಲೆಯಲ್ಲಿ, ಸಾರ್ವಜನಿಕರು ಹಾಗೂ ವಾಹನ ಸವಾರರು ಸುರಕ್ಷಿತವಾಗಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬಜಪೆ ಪೊಲೀಸ್ ಠಾಣೆಯಿಂದ ಅಧಿಕೃತ ಸೂಚನೆ ಹೊರಡಿಸಲಾಗಿದೆ. ಮಂಗಳೂರು ಮತ್ತು ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುವವರು ಜರಿನಗರ ರಸ್ತೆಯ ಮೂಲಕ ತೆರಳಲು ಹಾಗೂ ಕಟೀಲು, ಬಜಪೆ ಮತ್ತು ಕೈಕಂಬದ ಕಡೆಗೆ ತೆರಳುವವರು ಪೊರ್ಕೋಡಿ ರಸ್ತೆಯನ್ನು ಬಳಸಲು ಕೋರಲಾಗಿದೆ.
ಪ್ರಯಾಣಿಕರು ಯಾವುದೇ ಅನಾಹುತಕ್ಕೆ ಒಳಗಾಗದೆ ಎಚ್ಚರಿಕೆಯಿಂದ ಸಂಚರಿಸಿ, ಪೊಲೀಸ್ ಇಲಾಖೆಯ ಈ ಮಾರ್ಗದರ್ಶನಕ್ಕೆ ಸಹಕರಿಸಬೇಕಾಗಿ ಮನವಿ ಮಾಡಲಾಗಿದೆ.
- Advertisement -


