Friday, August 28, 2026
Homeಕರಾವಳಿಮಂಗಳೂರುಬೆಳ್ತಂಗಡಿ : 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ವಾರೆಂಟ್ ಆರೋಪಿ ಬಂಧನ

ಬೆಳ್ತಂಗಡಿ : 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ವಾರೆಂಟ್ ಆರೋಪಿ ಬಂಧನ

- Advertisement -
- Advertisement -

ಬೆಳ್ತಂಗಡಿ: ಸುಮಾರು 13 ವರ್ಷಗಳಿಂದ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣದ ವಾರೆಂಟ್ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 05-02-2012 ರಂದು ವೇಣೂರು ಮಹಾಮಸ್ತಾಭಿಷೇಕ ಕಾರ್ಯಕ್ರಮವನ್ನು ನೋಡಲು ವೇಣೂರು ಗ್ರಾಮದ ಮೂಡುಕೋಡಿ ನಿವಾಸಿ ಶಶಿಕಲಾ ಅವರು ಬಂದಾಗ ರಾತ್ರಿ ಸುಮಾರು 10 ಗಂಟೆಗೆ ಹೊಳೆಯ ಬದಿ ತಲುಪಿದಾಗ ಎರಡು ಗಂಡಸರು ಮತ್ತು ಆರು ಮಂದಿ ಹೆಂಗಸರ ಗುಂಪು ಅಡ್ಡಗಟ್ಟಿ 10 ಸಾವಿರವಿದ್ದ ಹಣದ ಬ್ಯಾಗ್ ಮತ್ತು 2 ಸಾವಿರದ ನೋಕಿಯಾ ಮೊಬೈಲ್ ಕಸಿದು ಪರಾರಿಯಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಂಟು ಮಂದಿ ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು, ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ವಿಚಾರಣೆ ಬಳಿಕ ಎ-1 ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಇದರಲ್ಲಿ ಎ-2  ಸೋಮಣ್ಣ@ ಶಾಮಣ್ಣ ಮತ್ತು ಎ-3 ಭಾಗ್ಯ ಭಜಂತ್ರಿ ಆರೋಪಿಗಳಿಗೆ 2015 ರಲ್ಲಿ ನ್ಯಾಯಾಲಯ ಹತ್ತು ವರ್ಷ ಶಿಕ್ಷೆ ವಿಧಿಸಲಾಗಿತ್ತು.

ಆರೋಪಿ ಬಂಧನ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯಲಾಪುರ ಕೊರಚರಟ್ಟಿ ಎಂಬಲ್ಲಿಂದ ಆ.27 ರಂದು  ಕೂಸಪ್ಪ ಮಗ ಪ್ರಕರಣದ ಎ-1 ಆರೋಪಿ ಶ್ರೀನಿವಾಸ ಕೆ. @ ಶೀನಪ್ಪ @ ಶೀನ (43) ವಾರಂಟ್ ಆರೋಪಿಯನ್ನು ಬಂಧಿಸಿ ಆ.28 ರಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಾರಂಟ್ ಜಾರಿ: ಮಂಗಳೂರು ನ್ಯಾಯಾಲಯದ SCNO-127/2015, ವೇಣೂರು ಪೊಲೀಸ್ ಠಾಣೆಯ ಅ.ಕ್ರ. 16/2012, ಕಲಂ 395 ಐಪಿಸಿ ಹಾಗೂ LPC No.04/2023 ಪ್ರಕರಣಗಳಲ್ಲಿ ಈತನ ವಿರುದ್ಧ ವಾರಂಟ್ ಜಾರಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಕಾರ್ಯಾಚರಣೆ: ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಹಾಗೂ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನಿರ್ದೇಶನದಂತೆ ವೇಣೂರು ಠಾಣಾ ಉಪನಿರೀಕ್ಷಕ ಅಕ್ಷಯ ಢವಗಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡದ ಸಿಬ್ಬಂದಿಗಳಾದ ಎಎಸ್ಐ ಬೆಣ್ಣಿಚನ್, ಹೆಚ್‌ಸಿ ಕೃಷ್ಣ, ಪಿಸಿ ಬಸವರಾಜ್ ಎಸ್.ಪಿ. ಹಾಗೂ ಪಿಸಿ ಮೋಹನ್ ಕುಮಾರ್ ಅವರು ಆರೋಪಿ ಬಂಧನದ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!