- Advertisement -
- Advertisement -
ಬೆಂಗಳೂರು: ನ್ಯಾಯಾಲಯವು 14ನೇ ಆರೋಪಿ ಪ್ರದೋಷ್ ಸಲ್ಲಿಕೆ ಮಾಡಿದ್ದ ಮಾಫಿ ಸಾಕ್ಷಿ ಅರ್ಜಿಯನ್ನು ನಿಬಂಧನೆಗಳೊಂದಿಗೆ ಅಂಗೀಕರಿಸಿದ್ದು, ಇದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಉಳಿದ 16 ಆರೋಪಿಗಳಿಗೆ ತೀವ್ರ ಕಾನೂನು ಸಂಕಷ್ಟ ಹಾಗೂ ಹಿನ್ನಡೆಯನ್ನು ತಂದೊಡ್ಡಿದೆ.
ಕೋರ್ಟ್ ನೀಡಿದ ಆದೇಶದ ಪ್ರಕಾರ, ಪ್ರದೋಷ್ ತಮಗೆ ತಿಳಿದಿರುವ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಮುಚ್ಚುಮರೆಯಿಲ್ಲದೆ ತಿಳಿಸಬೇಕಿದ್ದು, ಒಂದು ವೇಳೆ ಯಾವುದೇ ಸುಳ್ಳು ಮಾಹಿತಿ ನೀಡಿದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಪ್ರಾಸಿಕ್ಯೂಷನ್‌ಗೆ ನೀಡಲಾಗಿದೆ.
ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಪ್ರದೋಷ್ ಸಾಕ್ಷ್ಯ ನುಡಿಯಲಿದ್ದು, ಪ್ರಕರಣದ ವಿಚಾರಣೆಗೆ ದೊಡ್ಡ ತಿರುವು ದೊರೆತಿದೆ.
- Advertisement -


