ಉತ್ತರ ಪ್ರದೇಶದ ಕಾಂಪುರದ ಪಂಕಿ ಕೈಗಾರಿಕಾ ಪ್ರದೇಶದ ರಸಗೊಬ್ಬರ ಕಾರ್ಖಾನೆ ಹಾಗೂ ಹೈವೇ ಸಮೀಪದ ಸಾರ್ವಜನಿಕ ತ್ಯಾಜ್ಯ ವಿಲೇವಾರಿ ಜಾಗದಲ್ಲಿ ಟ್ರಕ್ ಒಂದರಲ್ಲಿ ಅಪಾರ ಪ್ರಮಾಣದ ಚಾಕೊಲೇಟ್ ಮತ್ತು ಟಾಫಿಗಳನ್ನು ಸುರಿಯಲಾಗಿತ್ತು.
ಈ ಚಾಕೊಲೇಟ್‌ಗಳು 2024 ರಲ್ಲೇ ಎಕ್ಸ್‌ಪೈರ್ ಆಗಿದ್ದು, ಸೇವನೆಗೆ ಸಂಪೂರ್ಣ ಅಯೋಗ್ಯವಾಗಿದ್ದರೂ, ಇದನ್ನು ಕಂಡ ಸ್ಥಳೀಯರು ಮುಗಿಬಿದ್ದು ಮನೆಗೆ ಒಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಪ್ಯಾಕೆಟ್ ಮೇಲಿನ ದಿನಾಂಕವನ್ನು ಪರಿಶೀಲಿಸದೆ ಜನರು ಚೀಲ, ರಟ್ಟಿನ ಪೆಟ್ಟಿಗೆ ಹಾಗೂ ಬೈಕ್-ಸೈಕಲ್‌ಗಳಲ್ಲಿ ಚಾಕೊಲೇಟ್‌ಗಳನ್ನು ತುಂಬಿಕೊಳ್ಳುತ್ತಿದ್ದರು. ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಇವು ಆರೋಗ್ಯಕ್ಕೆ ಹಾನಿಕರ ಎಂದು ಎಚ್ಚರಿಸಲು ಯತ್ನಿಸಿದರೂ ಜನರು ಅದನ್ನು ಲೆಕ್ಕಿಸದೆ ಬಾಚಿಕೊಳ್ಳುವುದರಲ್ಲೇ ನಿರತರಾಗಿದ್ದರು. ಸುಮಾರು ನಾಲ್ಕು ತಿಂಗಳ ಹಿಂದೆ ನಡೆದ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪಶ್ಚಿಮ ಕಾಂಪುರದ ಡಿಸಿಪಿ ಎಸ್‌ಎಂ ಖಾಸಿಂ ಅಬಿದಿ ಅವರು ಪಾಸ್ತಿ ಪೊಲೀಸ್ ಠಾಣಾಧಿಕಾರಿಗೆ ಸೂಚಿಸಿದ್ದಾರೆ.


