Saturday, August 22, 2026
Homeಕರಾವಳಿಮಂಗಳೂರುಪುತ್ತೂರು: ಕಂಕನಾಡಿ, ಕುದೂರು ಠಾಣೆಗಳ ಹಳೆಯ ಪ್ರಕರಣಗಳ ಆರೋಪಿ ಸುದರ್ಶನ ಪೈ ಬಂಧನ

ಪುತ್ತೂರು: ಕಂಕನಾಡಿ, ಕುದೂರು ಠಾಣೆಗಳ ಹಳೆಯ ಪ್ರಕರಣಗಳ ಆರೋಪಿ ಸುದರ್ಶನ ಪೈ ಬಂಧನ

- Advertisement -
- Advertisement -

ಪುತ್ತೂರು: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಒಂದರಲ್ಲಿ (ಅ.ಕ್ರ: 97/2026) ದಸ್ತಗಿರಿಯಾಗಿರುವ ಕಸಬಾ ನಿವಾಸಿ ಸುದರ್ಶನ ಪೈ, ಪಿ (29) ಎಂಬಾತನ ವಿರುದ್ಧ ಈ ಹಿಂದೆ ಕಂಕನಾಡಿ ಠಾಣೆಯಲ್ಲಿ ಎನ್‌ಡಿಪಿಎಸ್‌ (NDPS) ಹಾಗೂ ರಾಮನಗರದ ಕುದೂರು ಠಾಣೆಯಲ್ಲಿ ಕೊಲೆ ಯತ್ನ (307 IPC) ಸೇರಿದಂತೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದಾಗ ಆರೋಪಿಯ ತಂದೆ ಸದಾಶಿವ ಪೈ ಸ್ಥಳದಲ್ಲಿರಲಿಲ್ಲ. ಗಲಾಟೆಯ ಬಳಿಕ ಸ್ಥಳಕ್ಕೆ ಬಂದ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದು, ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಜಾಗ ಖಾಲಿ ಮಾಡಲು ಸೂಚಿಸಿದರೂ ತೆರಳದಿದ್ದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.

- Advertisement -

Latest News

error: Content is protected !!