Wednesday, August 19, 2026
Homeಮಹಾನ್ಯೂಸ್ಮುಂಬೈ; ದಹಿಸರ್ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ ಶನಿಗ್ರಂಥ ಪಾರಾಯಣ ಪೂಜೆ

ಮುಂಬೈ; ದಹಿಸರ್ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ ಶನಿಗ್ರಂಥ ಪಾರಾಯಣ ಪೂಜೆ

- Advertisement -
- Advertisement -

ಮುಂಬೈನ ದಹಿಸರ್ ಪೂರ್ವದ ರಾವಲ್ಪಾಡದಲ್ಲಿರುವ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ ಶ್ರಾವಣ ಮಾಸದ ಪ್ರಯುಕ್ತ 27ನೇ ವರ್ಷದ ಶ್ರೀ ಶನಿಗ್ರಂಥ ಪಾರಾಯಣ ಪೂಜೆಯು ಆಗಸ್ಟ್ 22, ಶನಿವಾರದಂದು ಜರುಗಲಿದೆ.

ಧಾರ್ಮಿಕ ಕಾರ್ಯಕ್ರಮಗಳು:

  • ಬೆಳಿಗ್ಗೆ 7:00 ರಿಂದ: ಶ್ರೀ ಗಣಪತಿ, ಶನೀಶ್ವರ, ಚಾಮುಂಡೇಶ್ವರಿ ದೇವಿ ಹಾಗೂ ಚಾಮುಂಡಿ-ಗುಳಿಗ ದೈವಗಳಿಗೆ ಪಂಚಾಮೃತ ಅಭಿಷೇಕ.
  • ಮಧ್ಯಾಹ್ನ 2:00 ರಿಂದ 6:00: ಯಕ್ಷಗಾನ ಭಾಗವತಿಕೆ ಶೈಲಿಯಲ್ಲಿ ಶನಿಗ್ರಂಥ ಪಾರಾಯಣ.
  • ರಾತ್ರಿ 7:30 ರಿಂದ: ಚಾಮುಂಡಿ-ಗುಳಿಗ ದೈವಗಳ ಆರಾಧನೆ, ಆವೇಶ ಸೇವೆ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ.

ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಆಡಳಿತ ಮಂಡಳಿ ವಿನಂತಿಸಿದೆ.

- Advertisement -

Latest News

error: Content is protected !!