Wednesday, August 19, 2026
Homeಕರಾವಳಿಉಡುಪಿಉಡುಪಿ ಮಹಾಲಕ್ಷ್ಮಿ ಬ್ಯಾಂಕ್ ಮ್ಯಾನೇಜರ್ ಸಾವು ಪ್ರಕರಣ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪ; ಶಾಸಕ ಯಶಪಾಲ್...

ಉಡುಪಿ ಮಹಾಲಕ್ಷ್ಮಿ ಬ್ಯಾಂಕ್ ಮ್ಯಾನೇಜರ್ ಸಾವು ಪ್ರಕರಣ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪ; ಶಾಸಕ ಯಶಪಾಲ್ ಸುವರ್ಣ ವಿರುದ್ಧ ಸದನದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪ

- Advertisement -
- Advertisement -

ಬೆಂಗಳೂರು: ಉಡುಪಿಯ ಮಹಾಲಕ್ಷ್ಮಿ ಬ್ಯಾಂಕ್ ಮ್ಯಾನೇಜರ್ ಸಾವು ಪ್ರಕರಣದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಭಾಗಿದಾರ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಿಧಾನ ಪರಿಷತ್ ನಲ್ಲಿ ಆರೋಪ ಮಾಡಿದ್ದಾರೆ.

ಗಮನ ಸೆಳೆಯುವ ಸೂಚನಾ ಕಲಾಪದ ವೇಳೆ ಬ್ಯಾಂಕ್ ಮ್ಯಾನೇಜರ್ ಕೊಲೆ ಆಗಿದ್ದು, ಪ್ರಕರಣದ ಎಸ್ಐಟಿ ತನಿಖೆ ಮಾಡಿಸಬೇಕು ಮತ್ತು ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ವಹಿಸುತ್ತದೆ, ಬ್ಯಾಂಕ್ ವ್ಯವಹಾರದ ಬಗ್ಗೆ ನಿಗಾ ವಹಿಸಲಾಗುತ್ತದೆ ಮತ್ತು ತನಿಖೆಗೆ ಎಸ್ ಐಟಿ ರಚನೆ ಮಾಡಲು ಚಿಂತಿಸಿದ್ದೇವೆ ಎಂದು ಸಭಾ ನಾಯಕ ಡಾ. ಯತೀಂದ್ರ ಸಿದ್ಧರಾಮಯ್ಯ ಸದನದಲ್ಲಿ ಭರವಸೆ ನೀಡಿದ್ದಾರೆ.

- Advertisement -

Latest News

error: Content is protected !!