Sunday, August 16, 2026
Homeಅಪರಾಧಪರಪ್ಪನ ಅಗ್ರಹಾರ ಜೈಲಿನ ಸಾಮಾನ್ಯ ಬ್ಯಾರಕ್‌ಗೆ ರೇಣುಕಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಸ್ಥಳಾಂತರ

ಪರಪ್ಪನ ಅಗ್ರಹಾರ ಜೈಲಿನ ಸಾಮಾನ್ಯ ಬ್ಯಾರಕ್‌ಗೆ ರೇಣುಕಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಸ್ಥಳಾಂತರ

- Advertisement -
- Advertisement -

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಚಾರ ಅಪರಾಧಿ ಪ್ರಜ್ವಲ್ ರೇವಣ್ಣನ ಹೈಸೆಕ್ಯೂರಿಟಿ ಬ್ಯಾರಕ್‌ನಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಈ ವೇಳೆ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡ ಅವರನ್ನು 16 ಮಂದಿ ಇರುವ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ಸಿಬ್ಬಂದಿ ಪ್ರತಿಯೊಂದು ಬ್ಯಾರಕ್ ಅನ್ನು ತಪಾಸಣೆ ನಡೆಸುತ್ತಿದ್ದಾರೆ.

ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್‌ ಅವರ ಭೇಟಿಯ ನಂತರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ನಟ ದರ್ಶನ್ ಇದ್ದ ಬ್ಯಾರಕ್ ಸುತ್ತಲೂ ಸೇರಿದಂತೆ ವಿವಿಧ ಬ್ಯಾರಕ್ ಹಾಗೂ ಕಾರಿಡಾರ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಣಾವಲು ಹೆಚ್ಚಿಸಲಾಗಿದೆ.

ಒಂದೇ ಬಾರಿಗೆ ಮೂರು ತಂಡಗಳಿಂದ ತನಿಖೆ ಆರಂಭವಾಗಿರುವುದು ಜೈಲಿನಲ್ಲಿರುವ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳಲ್ಲಿ ಅಚ್ಚರಿ ಮೂಡಿಸಿದೆ.

- Advertisement -

Latest News

error: Content is protected !!