Thursday, August 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಲಾಯಿಲ ಭೂ ಪರಿವರ್ತನೆಯಾಗದ ಜಾಗಕ್ಕೆ ಉದ್ಯಮ ಲೈಸೆನ್ಸ್; ಲೋಕಾಯುಕ್ತಕ್ಕೆ ಪಿಡಿಒ ವಿರುದ್ಧ ದೂರು...

ಬೆಳ್ತಂಗಡಿ : ಲಾಯಿಲ ಭೂ ಪರಿವರ್ತನೆಯಾಗದ ಜಾಗಕ್ಕೆ ಉದ್ಯಮ ಲೈಸೆನ್ಸ್; ಲೋಕಾಯುಕ್ತಕ್ಕೆ ಪಿಡಿಒ ವಿರುದ್ಧ ದೂರು ದಾಖಲು

- Advertisement -
- Advertisement -

ಬೆಳ್ತಂಗಡಿ : ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಭೂ ಪರಿವರ್ತನೆಯಾಗದ ಜಾಗದಲ್ಲಿ ಹೊಟೇಲ್ ಉದ್ಯಮ ನಡೆಸಲು ಕಾನೂನು ಬಾಹಿರವಾಗಿ ವಾಣಿಜ್ಯ ವ್ಯವಹಾರದ ಪರವಾನಿಗೆ ನೀಡಿರುವ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಆಯಿಶಾ ಕೋಂ ಎಚ್.ಅಬ್ದುಲ್ ಕರೀಮ್ ಎಂಬವರ ಸ.ನಂ: 164/2B1B ರಲ್ಲಿ 0.01.50 ಎಕ್ರರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದೇ ನ್ಯೂ ಮೈನಾ ಹೊಟೇಲ್ ಹೆಸರಿನಲ್ಲಿರುವ ವಾಣಿಜ್ಯ ವ್ಯವಹಾರದ ಉದ್ದೇಶಕ್ಕಾಗಿ ಜಾಗದ ಮಾಲೀಕೆ ಪತ್ನಿ ಆಯಿಶಾ ಆಗಿದ್ದರೂ ಪತಿ ಹೊಟೇಲ್ ಮಾಲೀಕ ಎಚ್.ಅಬ್ದುಲ್ ಕರೀಂ ಎಂಬವರಿಗೆ 30/09/2025 ರಂದು ಲಾಯಿಲಾ ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿ(ಪಿಡಿಒ) ಆಗಿದ್ದ ಶ್ರೀನಿವಾಸ.ಡಿ.ಪಿ ಇವರು ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡುದ್ದಾರೆ. ಭೂ ಪರಿವರ್ತನೆಯಾಗದೆ ಮತ್ತು 9/11 ಸೃಜನೆಯಾಗದೆ ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ  ಶ್ರೀನಿವಾಸ.ಡಿ.ಪಿ ಅವರು ಕಾನೂನು ಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕೆ ಲೈಸೆನ್ಸ್ ನೀಡಿ ಕಾನೂನು ಬಾಹಿರ ಕೃತ್ಯ ಮಾಡಿರುವುದರಿಂದ ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಆಗಿದ್ದ ಶ್ರೀನಿವಾಸ.ಡಿ.ಪಿ ಹಾಗೂ ಕಾನೂನು ಪ್ರಕಾರ ಯಾವುದೇ ದಾಖಲೆಗಳಿಲ್ಲದೆ ಲೈಸೆನ್ಸ್ ಮಾಡಿಸಿಕೊಂಡ ಆಯಿಶಾ ಮತ್ತು ಹೊಟೇಲ್ ಮಾಲೀಕ ಎಚ್.ಅಬ್ದುಲ್ ಕರೀಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಲಾಯಿಲ ಗ್ರಾಮಸ್ಥರೊಬ್ಬರು ಆ.6 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!