Thursday, July 30, 2026
Homeಮನರಂಜನೆಆಗಸ್ಟ್ 29, 30 ರಂದು ಹಾಸ್ಯನಟ ಚಿಕ್ಕಣ್ಣ ಕಲ್ಯಾಣ

ಆಗಸ್ಟ್ 29, 30 ರಂದು ಹಾಸ್ಯನಟ ಚಿಕ್ಕಣ್ಣ ಕಲ್ಯಾಣ

- Advertisement -
- Advertisement -

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಂಡ್ಯ ಮೂಲದ ಪಾವನಾ ಅವರೊಂದಿಗೆ ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿದ್ದು, ಆಗಸ್ಟ್ 29 ಮತ್ತು 30 ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿ ಮದುವೆ ಸಮಾರಂಭ ನೆರವೇರಲಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿಯಾಗಿರುವ ಪಾವನಾ ಅವರು ಇಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ. ಕಳೆದ ಆಗಸ್ಟ್‌ 2025ರಲ್ಲೇ ಇವರಿಬ್ಬರ ಮದುವೆ ನಿಶ್ಚಯವಾಗಿದ್ದು, ಇದೀಗ ಕಲ್ಯಾಣ ಮುಹೂರ್ತ ಹತ್ತಿರವಾಗಿದೆ.

ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಈ ಶುಭ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರು, ತಂತ್ರಜ್ಞರು ಹಾಗೂ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಲಿದ್ದಾರೆ.

- Advertisement -

Latest News

error: Content is protected !!