Thursday, July 30, 2026
HomeWorldಪ್ರಧಾನಿ ಮೋದಿಯವರ ವೀಡಿಯೊ ಬ್ಲಾಕ್ ಪ್ರಕರಣ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ; ಕ್ಷಮೆಯಾಚಿಸಿದ ಮೆಟಾ

ಪ್ರಧಾನಿ ಮೋದಿಯವರ ವೀಡಿಯೊ ಬ್ಲಾಕ್ ಪ್ರಕರಣ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ; ಕ್ಷಮೆಯಾಚಿಸಿದ ಮೆಟಾ

- Advertisement -
- Advertisement -

ಜುಲೈ 23ರಂದು ಪರೀಕ್ಷಾ ಪತ್ರಿಕೆ ಸೋರಿಕೆ ವಿರೋಧಿಸಿ ‘ಜೆನ್ ಝಿ’ ಯುವಕರು ನಡೆಸುತ್ತಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಮೆಟಾ ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕ್ಷಮೆಯಾಚಿಸಿದ್ದು, ತನ್ನ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಂಟೆಂಟ್ ಮಾಡರೇಶನ್ ವ್ಯವಸ್ಥೆಯಲ್ಲಾದ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದೆ.

ಆದಾಗ್ಯೂ, ಸಂಸ್ಥೆಯ ಕ್ಷಮೆಯಾಚನೆಯನ್ನು ಸ್ವೀಕರಿಸಿದರೂ ಕೇಂದ್ರ ಸರ್ಕಾರವು ಈ “ತಾಂತ್ರಿಕ ದೋಷ”ದ ಸಕಾರಣಕ್ಕೆ ತೃಪ್ತಿ ವ್ಯಕ್ತಪಡಿಸಿಲ್ಲ. ಐಟಿ ಕಾರ್ಯದರ್ಶಿ ಎಸ್‌. ಕೃಷ್ಣನ್ ಅವರು ಮೆಟಾದ ಎಐ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ನೇರವಾಗಿ ಪ್ರಶ್ನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಇನ್ಮುಂದೆ ಪ್ರಮುಖ (VVIP) ಖಾತೆಗಳ ಪೋಸ್ಟ್‌ಗಳನ್ನು ಬ್ಲಾಕ್ ಮಾಡುವ ಮೊದಲು ಕನಿಷ್ಠ ಇಬ್ಬರು ಹಿರಿಯ ಅಧಿಕಾರಿಗಳು ಪರಿಶೀಲಿಸುವ ವ್ಯವಸ್ಥೆ ಹಾಗೂ ಹೆಚ್ಚುವರಿ ಭದ್ರತೆ ನೀಡುವುದಾಗಿ ಮೆಟಾ ಭರವಸೆ ನೀಡಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಮುಖಾಮುಖಿ ವಿಚಾರಣೆಗಾಗಿ ಮೆಟಾ ಮತ್ತು ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರಿಗೆ ಸಮನ್ಸ್ ನೀಡಿದ್ದು, ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಯುವ ಸಾಧ್ಯತೆಯಿದೆ.

- Advertisement -

Latest News

error: Content is protected !!