- Advertisement -


- Advertisement -
ಬೆಳ್ತಂಗಡಿ : ದಿಡುಪೆ–ಸಂಸೆ ಅರಣ್ಯ ರಸ್ತೆಯೊಳಗೆ ಬಂದು ಬೈಕ್ ರ್ಯಾಲಿ ಮಾಡಿ ಅದರ ವಿಡಿಯೋ ಚಿತ್ರೀಕರಿಸಿ ಬಳಿಕ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ ಮೂವರು ಯುವಕರನ್ನು ಬೆಳ್ತಂಗಡಿ ವಲಯ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜು.17 ರಂದು ದಂಡ ವಿಧಿಸಲಾಗಿದೆ.
ಇದೇ ರೀತಿಯ ರ್ಯಾಲಿ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಇತರರನ್ನೂ ಗುರುತಿಸಲಾಗುತ್ತಿದ್ದು ಅವರ ವಿರುದ್ಧವೂ ಕಾರ್ಯಾಚರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಳ್ತಂಗಡಿ ವನ್ಯಜೀವಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರಣ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ, ಜೀಪ್ ರ್ಯಾಲಿ ಸೇರಿದಂತೆ ಇಂತಹ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಹಾಗೂ ನಿಷೇಧಿತ ಪ್ರದೇಶವಾಗಿದ್ದು, ಸಾರ್ವಜನಿಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವನ್ಯಜೀವಿ ಇಲಾಖೆಯಿಂದ ಸೂಚಿಸಲಾಗಿದೆ.
- Advertisement -


