Friday, July 10, 2026
Homeಕರಾವಳಿಮಂಗಳೂರುಕಲ್ಲುಗುಂಡಿ: ಅಕ್ರಮ ಕಲ್ಲು ಸಾಗಾಟ; ಲಾರಿ ವಶ, ಚಾಲಕ ಪರಾರಿ

ಕಲ್ಲುಗುಂಡಿ: ಅಕ್ರಮ ಕಲ್ಲು ಸಾಗಾಟ; ಲಾರಿ ವಶ, ಚಾಲಕ ಪರಾರಿ

- Advertisement -
- Advertisement -

ಸುಳ್ಯ: ಯಾವುದೇ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಸುಳ್ಯದ ಕಲ್ಲುಗುಂಡಿ ಹೊರಠಾಣೆಯ ಪೊಲೀಸರು ಲೋಡ್ ಸಮೇತ ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಕಂಡು ಲಾರಿ ಚಾಲಕ ರಸ್ತೆಬದಿಯಲ್ಲೇ ಲಾರಿ ಬಿಟ್ಟು ಓಡಿಹೋಗಿದ್ದಾನೆ.

ದಿನಾಂಕ 09-07-2026ರಂದು ಸಂಜೆ ಕಲ್ಲುಗುಂಡಿ ಹೊರಠಾಣೆಯ ಬಳಿ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆ ಮಾರ್ಗವಾಗಿ ಬಂದ KA 12 B 0275 ನೋಂದಣಿ ಸಂಖ್ಯೆಯ ಲಾರಿಯನ್ನು ತಪಾಸಣೆಗಾಗಿ ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ತಕ್ಷಣ ಚಾಲಕನು ಲಾರಿಯನ್ನು ರಸ್ತೆಬದಿಗೆ ನಿಲ್ಲಿಸಿ ಅಲ್ಲಿಂದ ಓಡಿಹೋಗಿದ್ದಾನೆ.

ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ 600 ಕಲ್ಲುಗಳನ್ನು ಲೋಡ್ ಮಾಡಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲು ಹಾಗೂ ಲಾರಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಲಾರಿಯ ಮಾಲೀಕ ಮತ್ತು ಚಾಲಕನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 93/2026 ರಂತೆ ಬಿಎನ್‌ಎಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!