Thursday, July 9, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಅಂತರ್ ರಾಜ್ಯ ಕುಖ್ಯಾತ ಕಳ್ಳನಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ : ಅಂತರ್ ರಾಜ್ಯ ಕುಖ್ಯಾತ ಕಳ್ಳನಿಗೆ ನ್ಯಾಯಾಂಗ ಬಂಧನ

- Advertisement -
- Advertisement -

ಬೆಳ್ತಂಗಡಿ : ಆರು ಕಡೆ ಸರಣಿ ಕಳ್ಳತನ ಮಾಡಿದ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಬೆಳ್ತಂಗಡಿ ಪೊಲೀಸರು ತಮಿಳುನಾಡು ರಾಜ್ಯದ ಕೊಯಮುತ್ತೂರು ಜಿಲ್ಲೆಯ  ವಿಜಯನ್ ಮಗ ಜಯಕುಮಾರ್(55) ಎಂಬಾತನನ್ನು ಗುರುವಾಯನಕೆರೆ ಜಂಕ್ಷನ್ ನಲ್ಲಿ ಜು.8 ರಂದು ಸಂಜೆ 6 ಗಂಟೆಗೆ ಬಂಧಿಸಿ ವಿಚಾರಣೆ ನಡೆಸಿ ಜು.9 ರಂದು ಕಳ್ಳತನ ಮಾಡಿದ ಜಾಗಗಳಲ್ಲಿ ಸ್ಥಳ ಮಹಜರು ನಡೆಸಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದಲ್ಲಿ ಸಂಜೆ ಬೆಳ್ತಂಗಡಿ ನ್ಯಾಯಾಲಯ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಬಳಿಯಿಂದ ಪೊಲೀಸರು ಕಳ್ಳತನಕ್ಕೆ ಉಪಯೋಗಿಸಿದ ಒಂದು ಸ್ಕ್ರೂ ಡ್ರೈವರ್ , ಒಂದು ರಾಡ್, ಒಂದು ಆತನ ಕೀ ಪ್ಯಾಂಡ್ ಮೊಬೈಲ್ , ಕಳ್ಳತನ ಮಾಡಿದ ಒಂದು ಆಂಡ್ರ್ಯಾಡ್ ಮೊಬೈಲ್ ,ಒಂದು ಬ್ಯಾಗ್ ಹಾಗೂ 700 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!