Tuesday, July 7, 2026
Homeಕರಾವಳಿಮಂಗಳೂರು‘ಭಾರತದ ಸೇತುವೆ ಮನುಷ್ಯ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನ

‘ಭಾರತದ ಸೇತುವೆ ಮನುಷ್ಯ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನ

- Advertisement -
- Advertisement -

ಸುಳ್ಯ: ದೇಶಾದ್ಯಂತ ‘ತೂಗು ಸೇತುವೆಗಳ ಸರದಾರ’ ಹಾಗೂ ‘ಭಾರತದ ಸೇತುವೆ ಮನುಷ್ಯ’ (Bridge Man of India) ಎಂದೇ ಪ್ರಖ್ಯಾತರಾಗಿದ್ದ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಉತ್ತರಾಖಂಡದ ಪವಿತ್ರ ದೇಗುಲಗಳ ಪ್ರವಾಸ ಕೈಗೊಂಡಿದ್ದ ಅವರು, ತೀವ್ರ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಸುಳ್ಯದ ಖಾಸಗಿ ಆಸ್ಪತ್ರೆಗೆ (ಕೆವಿಜಿ ಆಸ್ಪತ್ರೆ) ದಾಖಲಾಗಿದ್ದ ಅವರು, ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಉಷಾ ಅವರು ಈಗಾಗಲೇ ನಿಧನರಾಗಿದ್ದರು.ಗ್ರಾಮೀಣ ಭಾರತದ ಬೆಳಕಾಗಿದ್ದ ಚೇತನ

ಗಿರೀಶ್ ಭಾರದ್ವಾಜ್ ಅವರು ದೇಶದ ವಿವಿಧೆಡೆ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಸಂಪರ್ಕ ಕ್ರಾಂತಿ ಉಂಟುಮಾಡಿದ್ದರು. ನದಿ, ತೊರೆಗಳಿಂದಾಗಿ ಮುಖ್ಯವಾಹಿನಿಯಿಂದ ದೂರವುಳಿದಿದ್ದ ಹತ್ತಾರು ಹಳ್ಳಿಗಳಿಗೆ ಇವರು ನಿರ್ಮಿಸಿದ ಸೇತುವೆಗಳು ಆಸರೆಯಾಗಿದ್ದವು. ಇವರ ಅಪಾರ ಜನಸೇವೆ ಹಾಗೂ ತಾಂತ್ರಿಕ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ‘ಪದ್ಮಶ್ರೀ’ ಪುರಸ್ಕಾರ ನೀಡಿ ಗೌರವಿಸಿತ್ತು.

ಗ್ರಾಮೀಣ ಭಾರತದ ನೂರಾರು ಹಳ್ಳಿಗಳ ಜನರ ಬದುಕಿಗೆ ಬೆಳಕಾಗಿದ್ದ ಮಹಾನ್ ತಾಂತ್ರಿಕ ಚೇತನವೊಂದು ಗಿರೀಶ್ ಭಾರದ್ವಾಜ್ ಅವರ ನಿಧನದಿಂದಾಗಿ ಮರೆಯಾದಂತಾಗಿದೆ. ಇವರ ಅಗಲಿಕೆಗೆ ನಾಡಿನ ಗಣ್ಯರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!