Friday, July 3, 2026
Homeಕರಾವಳಿಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ವ್ಯಕ್ತಿ ಸಾವು

ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ವ್ಯಕ್ತಿ ಸಾವು

- Advertisement -
- Advertisement -

ಅರಂತೋಡು: ಸಂಪಾಜೆಯ ಆಲಡ್ಕ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟ ಘಟನೆ ಜುಲೈ 2ರ ಗುರುವಾರ ವರದಿಯಾಗಿದೆ.

ಮೃತರನ್ನು ಕಾಸರಗೋಡು ಮೂಲದ ಜೋಸ್ ಮ್ಯಾದ್ರೂ ಎಂದು ಗುರುತಿಸಲಾಗಿದೆ. ಇವರು ಸಂಪಾಜೆ ಪರಿಸರದಲ್ಲಿ ತೋಟವೊಂದನ್ನು ಲೀಸ್ (ಗುತ್ತಿಗೆ)ಗೆ ಪಡೆದುಕೊಂಡು, ಅಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದುಕೊಂಡು ಕೃಷಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!