Friday, July 3, 2026
Homeಅಪರಾಧಡೇಕೇರ್ ನಲ್ಲಿ ಎರಡು ವರ್ಷದ ಮಕ್ಕಳಿಗೆ ಚಿತ್ರಹಿಂಸೆ; ಐವರು ಆರೋಪಿಗಳ ಬಂಧನ

ಡೇಕೇರ್ ನಲ್ಲಿ ಎರಡು ವರ್ಷದ ಮಕ್ಕಳಿಗೆ ಚಿತ್ರಹಿಂಸೆ; ಐವರು ಆರೋಪಿಗಳ ಬಂಧನ

- Advertisement -
- Advertisement -

ಬೆಂಗಳೂರಿನ ಕ್ಯಾಪ್‍ಜೆಮಿನಿ ಕಂಪೆನಿಯ ಶಿಶುಪಾಲನಾ ಕೇಂದ್ರದಲ್ಲಿ ಎರಡು ವರ್ಷದ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಆಘಾತಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‍ಎಎಲ್ ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಸದ್ಯ ಈ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಬಂಧಿತರನ್ನು ಅಲ್ಲಿಯೇ ಕೆಲಸ ಮಾಡುತ್ತಿದ್ದ ಮಂಜುಳಾ, ವಿಜಯಲಕ್ಷ್ಮೀ, ಭವಾನಿ, ಸಿಂಧು ಮತ್ತು ಬಿಂದು ಎಂದು ಗುರುತಿಸಲಾಗಿದೆ. ಈ ಹಿಂದೆ ಮಕ್ಕಳ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ಕುರಿತು ಹಲವು ಬಾರಿ ಮೇಲ್ವಿಚಾರಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದ್ದು, ಈ ಬಗ್ಗೆ ದೂರು ನೀಡಿದ್ದ ಸಿಬ್ಬಂದಿಯನ್ನೇ ಕಳೆದ ತಿಂಗಳು ಕೆಲಸದಿಂದ ವಜಾ ಮಾಡಲಾಗಿತ್ತು.

ತದನಂತರ, ವಜಾಗೊಂಡಿದ್ದ ಉದ್ಯೋಗಿಯು ಅದೇ ಡೇಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದ್ಯೋಗಿ ಸ್ನೇಹಿತರೊಬ್ಬರ ಮೂಲಕ ಮಕ್ಕಳ ಮೇಲಿನ ದೌರ್ಜನ್ಯದ ವಿಡಿಯೋ ಮಾಡಿಸಿ ಈ ಕೃತ್ಯವನ್ನು ಬೆಳಕಿಗೆ ತಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!