Friday, July 3, 2026
Homeತಾಜಾ ಸುದ್ದಿ"ಟ್ರಾಫಿಕ್‌ನಲ್ಲಿ ವ್ಯಕ್ತಿಗೆ ಹೃದಯಾಘಾತ! ದೇವರಂತೆ ಬಂದು ಜೀವ ಉಳಿಸಿದ ನರ್ಸ್‌ಗಳು!"

“ಟ್ರಾಫಿಕ್‌ನಲ್ಲಿ ವ್ಯಕ್ತಿಗೆ ಹೃದಯಾಘಾತ! ದೇವರಂತೆ ಬಂದು ಜೀವ ಉಳಿಸಿದ ನರ್ಸ್‌ಗಳು!”

- Advertisement -
- Advertisement -

ಕೇರಳ; “ಟ್ರಾಫಿಕ್ ಜ್ಯಾಮ್‌ನಲ್ಲಿ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವ್ಯಕ್ತಿಗೆ ದೇವರಂತೆ ಬಂದು ಇಬ್ಬರು ನರ್ಸ್‌ಗಳು ಜೀವ ಕೊಟ್ಟಿದ್ದಾರೆ. “ಕೇರಳದ ಎರ್ನಾಕುಲಂನಲ್ಲಿ ಸಿನೋಜ್ ಎಂಬ 43 ವರ್ಷದ ವ್ಯಕ್ತಿ ಎದೆನೋವಿನಿಂದ ಕಾರಿನಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅದೇ ರಸ್ತೆಯಲ್ಲಿ ಸರ್ಕಾರಿ  ಬಸ್‌ನಲ್ಲಿ ಹೋಗ್ತಿದ್ದ ನರ್ಸ್ ಅಂಜಲಿ ಮತ್ತು ನರ್ಸಿಂಗ್ ಸ್ಟೂಡೆಂಟ್ ಆರ್ದ್ರಾ ಇದನ್ನ ಗಮನಿಸಿದ್ದಾರೆ. ಕೂಡಲೇ ಬಸ್ ನಿಂದ ಇಳಿದ ಅವರು ಆಸ್ಪತ್ರೆಗೆ ತಲುಪುವವರೆಗೂ ಸಿನೋಜ್  ಅವರಿಗೆ ಕಾರಿನ ಒಳಗೇ CPR ನೀಡುವುದನ್ನು ನೀಡಿದ್ದಾರೆ.

ಸ್ಥಳದಲ್ಲಿದ್ದ ಒಬ್ಬರು ಕಾರು ಚಲಾಯಿಸಿದ್ರೆ, ಸಾರ್ವಜನಿಕರು ಟ್ರಾಫಿಕ್ ಕ್ಲಿಯರ್ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ.” “ಸರಿಯಾದ ಸಮಯಕ್ಕೆ ಸಿಪಿಆರ್ ಸಿಕ್ಕಿದ್ದರಿಂದ ಸಿನೋಜ್ ಅವರ ಜೀವ ಉಳಿದಿದೆ. ಇಬ್ಬರು ನರ್ಸ್ ಗಳ ಸಮಯಪ್ರಜ್ಞೆ ಹಾಗೂ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!