Friday, July 3, 2026
Homeಅಪರಾಧಮಾದಕ ವಸ್ತು ಸೇವನೆ: ಯುವಕನ ಬಂಧನ

ಮಾದಕ ವಸ್ತು ಸೇವನೆ: ಯುವಕನ ಬಂಧನ

- Advertisement -
- Advertisement -

ಮಂಗಳೂರು: ನಗರದ ಹೊಯ್ಗೆ ಬಜಾರ್ ಬಳಿ ಮಾದಕ ವಸ್ತು ಸೇವಿಸಿದ ಆರೋಪದ ಮೇಲೆ ಬೋಳಾರ ಫರ್ರಿರೋಡ್ ನಿವಾಸಿಯಾದ ಪ್ರಿಯಾಂಶು ಬೋಳಾರ್ (24) ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಜೂನ್ 30ರಂದು ಸಂಜೆ 4 ಗಂಟೆಯ ಸುಮಾರಿಗೆ ಬೋಳಾರ ಬಳಿ ಪ್ರಿಯಾಂಶು ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿತ್ತು. ತಕ್ಷಣವೇ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!