- Advertisement -


- Advertisement -
ರಾಮನಗರ; ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ದುರಂತ ಅಂತ್ಯವಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಎಂಬಲ್ಲಿ ನಡೆದಿದೆ.
ಕಾವೇರಿ ಕಂಪನಿಗೆ ಸೇರಿದ ಕಲ್ಲಿನ ಕ್ವಾರಿಯಲ್ಲಿ ಇಂದು ಬೆಳಗ್ಗೆ ಕಾರ್ಮಿಕರು ಕೆಲಸ ಮಾಡುವಾಗ ಈ ದುರ್ಘಟನೆ ನಡೆದಿದೆ. ಮೇಲೆ ಹಿಟಾಚಿಯಲ್ಲಿ ಕೆಲಸ ಮಾಡುತ್ತಿತ್ತು. ಈ ವೇಳೆ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಂಡೆ ಬಿದ್ದಿದೆ. ಹೊಸ ಕ್ರಷರ್ ನಡೆಸಲು ಹಿಟಾಚಿ ಡ್ರೈವರ್ ಸ್ಥಳ ಕ್ಲೀನ್ ಮಾಡುತ್ತಿದ್ದ. ಈ ವೇಳೆ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದನ್ನ ಗಮನಿಸದ ಹಿಟಾಚಿ ಡ್ರೈವರ್ ಎರಡು-ಮೂರು ಕಲ್ಲು ಬಂಡೆಗಳನ್ನ ಕೆಳಗೆ ತಳ್ಳಿದ್ದಾನೆ. ಕೆಳಗೆ ಕೆಲಸ ಮಾಡ್ತಿದ್ದ ಕೂಲಿ ಕಾರ್ಮಿಕರ ತಲೆಯ ಮೇಲೆ ಬಂಡೆ ಬಿದ್ದಿದೆ. ಪರಿಣಾಮ 7 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಗಾಯಗೊಂಡಿರುವ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕೂಲಿ ಕಾರ್ಮಿಕರು ಬಿಹಾರದವರು ಎನ್ನಲಾಗಿದೆ.
- Advertisement -


