Wednesday, July 1, 2026
Homeಅಪರಾಧ9 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

9 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

- Advertisement -
- Advertisement -

ಬೆಳ್ತಂಗಡಿ : ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಶ್ರೀನಿವಾಸ ನನ್ನು ಆಂಧ್ರಪ್ರದೇಶದ ಚಿತ್ತೂರು ಎಂಬಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬೆಳ್ತಂಗಡಿ ನ್ಯಾಯಲಯ CC No. 597/2017 CR NO. 169/2016. ಕಲಂ, 379, 201 ಐಪಿಸಿ (ಕಾರಿನಿಂದ ಎ.ಟಿ.ಎಂ ಕಾರ್ಡ್ ಕಳ್ಳತನ ಮಾಡಿ ಹಣ ಡ್ರಾಂ ಮಾಡಿದ) ಪ್ರಕರಣದಲ್ಲಿ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆ ಕವಲಗುಂಟ, ಪೆನಮೂರು ನಿವಾಸಿ ಶ್ರೀನಿವಾಸ (35) ಎಂಬಾತನನ್ನು ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ ಕೆ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ರವಿ ಬಿ ಎಸ್ ನೇತೃತ್ವದ ಧರ್ಮಸ್ಥಳ ಪೊಲೀಸ್ ಠಾಣೆಯ ಉಪ ನೀರಿಕ್ಷಕರು ಸಮರ್ಥ್ ರವರ ತಂಡದ ಸಿಬ್ಬಂದಿ ಸಿಬ್ಬಂದಿಗಳಾದ ವ್ರಷಭ ಮತ್ತು ಚರಣ್ ರಾಜ್ ರವರು ಜೂ.30 ರಂದು ಆಂಧ್ರಪ್ರದೇಶದ ಚಿತ್ತೂರು ಎಂಬಲ್ಲಿಂದ ದಸ್ತಗಿರಿ ಮಾಡಿ ಜು.1 ರಂದು ನ್ಯಾಯಾಧಿಶರ ಮುಂದೆ ಸಿಬ್ಬಂದಿಗಳಾದ ಮುತ್ತಪ್ಪ ಮತ್ತು ಪ್ರೇಮ್ ಕುಮಾರ್ ರ ಮುಖೇನ ಹಾಜರುಪಡಿಸಲಾಗಿ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

Latest News

error: Content is protected !!