Wednesday, July 1, 2026
Homeಕರಾವಳಿಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಅತ್ತೆ ಮೇಲಂತಬೆಟ್ಟು ಲಕ್ಷ್ಮೀಅಮ್ಮ ನಿಧನ

ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಅತ್ತೆ ಮೇಲಂತಬೆಟ್ಟು ಲಕ್ಷ್ಮೀಅಮ್ಮ ನಿಧನ

- Advertisement -
- Advertisement -

ಬೆಳ್ತಂಗಡಿ; ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಅತ್ತೆ ಮೇಲಂತಬೆಟ್ಟು ಲಕ್ಷ್ಮೀಅಮ್ಮ (82) ಅವರು ವಯೋಸಹಜ ಅನಾರೋಗ್ಯ ಮತ್ತು ಹೃದಯಾಘಾತದಿಂದ ಜೂ.30 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಆದರ್ಶ ಗೃಹಿಣಿಯಾಗಿದ್ದ ಅವರು ಗೌರವ ಮತ್ತು ಆದರಾತಿಥ್ಯದ ವಿಚಾರದಲ್ಲಿ ಹೃದಯ ಶ್ರೀಮಂತಿಗೆ ಹೊಂದಿದ್ದರು. ಮೃತರು ಮಕ್ಕಳಾದ ಪ್ರಭಾವತಿ, ಕನ್ನಡ ಪ್ರಭ ಮುಖ್ಯ ಸಂಪಾದಕರಾಗಿರುವ ಜೋಗಿಯವರ ಪತ್ನಿ ಜ್ಯೋತಿ, ಸವಿತಾ ಭಟ್, ಚಲನಚಿತ್ರ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಜಿ ಕೃಷ್ಣ ಬೆಳ್ತಂಗಡಿ, ಶಂಕರ ವಿಠಲ, ಗೀತಾಲಕ್ಷ್ಮೀ ಮತ್ತು ಇಂದಿರಾ ಭಟ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ವಿಧಿಗಳು ಜು.1 ರಂದು ಮೇಲಂತಬೆಟ್ಟು ಮನೆಯಲ್ಲಿ ಜರುಗಿತು.

- Advertisement -

Latest News

error: Content is protected !!