Tuesday, June 30, 2026
HomeWorldಭಾರತೀಯ ಭೂಸೇನೆಯ 31ನೇ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಆಯ್ಕೆ

ಭಾರತೀಯ ಭೂಸೇನೆಯ 31ನೇ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಆಯ್ಕೆ

- Advertisement -
- Advertisement -

ನವದೆಹಲಿ: ಭಾರತೀಯ ಭೂಸೇನೆಯ 31ನೇ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಅವರು ಜೂನ್ 30ರ ಮಂಗಳವಾರದಂದು ಅಧಿಕಾರ ವಹಿಸಿಕೊಂಡರು.

ಸುಮಾರು ನಾಲ್ಕು ದಶಕಗಳ ಕಾಲ ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಜನರಲ್ ಉಪೇಂದ್ರ ದ್ವಿವೇದಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಇವರು, ಇದಕ್ಕೂ ಮುನ್ನ ಭೂಸೇನೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರ್ಮರ್ಡ್ ಕಾರ್ಪ್ಸ್ (ಟ್ಯಾಂಕ್ ರೆಜಿಮೆಂಟ್) ವಿಭಾಗದ ಅಧಿಕಾರಿಯಾಗಿರುವ ಜನರಲ್ ಧೀರಜ್ ಸೇಠ್ ಅವರು, 1997ರಲ್ಲಿ ನಿವೃತ್ತರಾದ ಜನರಲ್ ಶಂಕರ್ ರಾಯ್ ಚೌಧರಿ ಅವರ ನಂತರ ಕಳೆದ ಮೂರು ದಶಕಗಳಲ್ಲಿ ಈ ಅತ್ಯುನ್ನತ ಹುದ್ದೆಗೇರಿದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಪದವಿ ಪಡೆದು ಡಿಸೆಂಬರ್ 1986ರಲ್ಲಿ ಸೇನೆಗೆ ಸೇರಿದ ಜನರಲ್ ಧೀರಜ್ ಸೇಠ್ ಅವರಿಗೆ ಸುಮಾರು 40 ವರ್ಷಗಳ ಸುದೀರ್ಘ ಮಿಲಿಟರಿ ಅನುಭವವಿದೆ. ತಮ್ಮ ವೃತ್ತಿಜೀವನದಲ್ಲಿ ದೇಶಾದ್ಯಂತ ಹಲವು ಪ್ರಮುಖ ಕಾರ್ಯಾಚರಣೆ, ಕಮಾಂಡ್ ಮತ್ತು ಸ್ಟಾಫ್ ಹುದ್ದೆಗಳನ್ನು ನಿಭಾಯಿಸಿರುವ ಇವರು, ಆರ್ಮರ್ಡ್ ರೆಜಿಮೆಂಟ್, ಆರ್ಮರ್ಡ್ ಬ್ರಿಗೇಡ್, ಸ್ಟ್ರೈಕ್ ಕಾರ್ಪ್ಸ್ ಹಾಗೂ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾದ ಪಡೆಗಳ ನೇತೃತ್ವ ವಹಿಸಿದ್ದರು.

ಅಲ್ಲದೆ, ಭಾರತದ ಪಶ್ಚಿಮ ಗಡಿಯ ರಕ್ಷಣೆಯ ಜವಾಬ್ದಾರಿ ಹೊಂದಿರುವ ಕಾರ್ಯತಂತ್ರದ ಪ್ರಮುಖ ಕಮಾಂಡ್‌ಗಳಾದ ಸದರ್ನ್ ಕಮಾಂಡ್ ಮತ್ತು ಸೌತ್ ವೆಸ್ಟರ್ನ್ ಕಮಾಂಡ್ ಎರಡನ್ನೂ ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ.

- Advertisement -

Latest News

error: Content is protected !!