Sunday, June 21, 2026
Homeಕರಾವಳಿಮಂಗಳೂರುನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ                    

ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ                    

- Advertisement -
- Advertisement -

ನೆಲ್ಯಾಡಿ:  ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ  ಜೂನ್ 20 ಶನಿವಾರದಂದು ವಿಶ್ವ ಯೋಗ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡ ಈ ಶುಭ ಸಂದರ್ಭದಲ್ಲಿ  ವಿದ್ಯಾಲಯದ ವಿದ್ಯಾರ್ಥಿಗಳಿಗೆ  ಶ್ರೀ ಪತಂಜಲಿ ಯೋಗ  ಶಿಕ್ಷಣ ಸಮಿತಿ ಸದಸ್ಯರಾದ  ಬಾಲಚಂದ್ರ ಶ್ರೀಮತಿ ಗಾಯತ್ರಿ ಮತ್ತು ಮುತ್ತಪ್ಪ ರವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಕಾರ ಪರಿವೀಕ್ಷಕರಾದ ಭಗಿನಿ ಮೀನಾಕ್ಷಿ ಮಾತಾಜಿಯವರು ,”ಮನಸ್ಸು  ಹೇಳಿದ್ದನ್ನು ದೇಹ ಮಾಡುತ್ತದೆ. ಹೀಗಾಗ ಬೇಕಾದರೆ ಅದು ಯೋಗದಿಂದ ಮಾತ್ರ ಸಾಧ್ಯ. ಆದ್ದರಿ೦ದ  ಎಲ್ಲರೂ ಯೋಗ ಮಾಡಿ ಅದರ ಪ್ರಯೋಜನ  ಪಡೆಯಬೇಕು” ಎಂದು ಹೇಳಿ  ಶುಭ ಹಾರೈಸಿದರು.

 ವೇದಿಕೆಯಲ್ಲಿ ಕನ್ನಡ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕ ಶ್ರೀಯುತ ಗಣೇಶ್ ವಾಗ್ಲೆ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯ ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ಶ್ರೀಮತಿ  ಧನ್ಯಶ್ರೀ ಸ್ವಾಗತಿಸಿ, ಶ್ರೀಮತಿ ಯೋಗೀಶ್ವರಿ ವಂದಿಸಿದರು. ಶ್ರೀಮತಿ  ಸೌಮ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!